ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಮಾರತ್ತಹಳ್ಳಿಯಲ್ಲಿ ಬೇಕರಿ ಯುವಕರ ಮೇಲೆ ಮೃಗಗಳಂತೆ ವರ್ತಿಸಿದ್ದ ಘಟನೆ ಮಾಸುವ ಮುನ್ನ ಅಂಥದ್ದೇ ಒಂದು ಘಟನೆ ಕೆಂಗೇರಿ (Kengeri) ಉಪನಗರದಲ್ಲಿ ವರದಿಯಾಗಿದೆ.
Advertisement
ಪುಡಿ ರೌಡಿಗಳ ಗ್ಯಾಂಗ್ ಕ್ಷುಲ್ಲಕ ಕಾರಣಕ್ಕೆ ಬೇಕರಿ ಮಾಲೀಕ ಹಾಗೂ ಹೆಂಡತಿ ಮಕ್ಕಳ ಮೇಲೆ ಮನಸ್ಸೋ ಇಚ್ಛೆ ದಾಳಿ ಮಾಡಿ ಎಸ್ಕೇ ಆಗಿದ್ದಾರೆ. ದುರುಳರ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟೀ ಸಿಗರೇಟ್ ಸಾಲ ಕೊಡಲಿಲ್ಲ ಅನ್ನೋ ಕಾರಣಕ್ಕೆ ಬಡ ಅಂಗಡಿ ಮಾಲೀಕ ಶಿವಕುಮಾರ್ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ಮಾಡಿದ್ದಾರೆ. ಶಿವಕುಮಾರ್ ಕಿರಚಾಡುತ್ತಿರೋದನ್ನ ನೋಡಿ ಓಡಿ ಬಂದ ಪತ್ನಿ ಮಕ್ಕಳ ಮೇಲೂ ಪುಂಡರು ಹಲ್ಲೆ ಮಾಡಿ ಹೋಗಿದ್ದಾರೆ.
Advertisement
Advertisement
ಪುಡಿ ರೌಡಿ ಸಲ್ಮಾನ್ ಟಿಪ್ಪು ಪುಂಡರ ಗ್ಯಾಂಗ್ ಕಟ್ಟಿಕೊಂಡು ಬಂದು ಹಿಗ್ಗಾಮುಗ್ಗ ಥಳಿಸಿ ಎಸ್ಕೇಪ್ ಆಗಿದ್ದಾನೆ. ಶಿವಕುಮಾರ್ ಮೂಲತಃ ರಾಮನಗರ (Ramanagar) ದವರಾಗಿದ್ದು ಕೆಂಗೇರಿ ಉಪನಗರದಲ್ಲಿ ಬೇಕರಿ ಇಟ್ಟುಕೊಂಡಿರುತ್ತಾರೆ. ಪುಡಿ ರೌಡಿ ಸಲ್ಮಾನ್ ಟಿಪ್ಪು ನಿತ್ಯ ಬಂದು ಶಿವಕುಮಾರ್ ಕಾಂಡಿಮೆಂಟ್ಸ್ ನಲ್ಲಿ ಟೀ (Tea), ಸಿಗರೇಟ್ (Cigrette) ಸಾಲ ಬರೆಸಿ ಹೋಗುತ್ತಿದ್ದ. ಸುಮಾರು ಸಾವಿರಾರು ರೂಪಾಯಿ ಸಾಲವಾಗಿದ್ದರಿಂದ ಶಿವಕುಮಾರ್ ಮತ್ತೆ ಸಾಲ ಕೊಡಲು ನಿರಾಕರಿಸಿದ್ದಾರೆ. ಅಷ್ಟಕ್ಕೆ ಕುಪಿತಗೊಂಡ ಗೂಂಡ ಸಲ್ಮಾನ್ ನನ್ನ ಹತ್ರನೆ ಹಣ ಕೇಳ್ತಿನಿ ಸಂಜೆ ಬಂದು ಮರ್ಡರ್ ಮಾಡಿ ಹೋಗುತ್ತೆನೆಂದು ಧಮ್ಕಿ ಹಾಕಿ ಹೋಗಿರುತ್ತಾನೆ.
Advertisement
ಸಂಜೆ ಸುಮಾರಿಗೆ ಜೆನ್ ಕಾರಿನಲ್ಲಿ ನಾಲ್ಕು ಮಂದಿ ಇರೋ ಪುಂಡರ ಗ್ಯಾಂಗ್ ಕಟ್ಟಿಕೊಂಡು ಬಂದು ಶಿವಕುಮಾರ್ ಹಾಗೂ ಪತ್ನಿ ಹಾಗೂ ಪುಟಾಣಿ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂದ ಆರೋಪಿಗಳ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ (FIR) ದಾಖಲಾಗಿದ್ದು ಸಿಸಿಟಿವಿ ದೃಶ್ಯವಳಿಗಳ ಆಧಾರದ ಮೇಲೆ ಆರೋಪಿಗಳಿಗಾಗಿ ಬಲೆ ಬಿಸಲಾಗಿದೆ. ಇದನ್ನೂ ಓದಿ: ಹೊಸಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವು – 50ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k