ಮಡಿಕೇರಿ: ಲೋ ಬಿಪಿಯಾಗಿ (Low BP) ಮರದಿಂದ ಬಿದ್ದು ಪೊಲೀಸ್ (Police) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರದಲ್ಲಿ (Kushalnagara) ನಡೆದಿದೆ.
ಮೃತ ಪೊಲೀಸ್ ಸಿಬ್ಬಂದಿಯನ್ನು ಲೋಕೇಶ್ (40) ಎಂದು ಗುರುತಿಸಲಾಗಿದೆ. ಇವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ (Appachu Ranjan) ಅವರ ಗನ್ ಮ್ಯಾನ್ (Gun Man) ಆಗಿದ್ದು, 15 ವರ್ಷಗಳಿಗೂ ಹೆಚ್ಚು ಕಾಲ ಅವರ ಬಳಿ ಕೆಲಸ ಮಾಡಿದ್ದರು. ಇದನ್ನೂ ಓದಿ: ತಿರುಪತಿ ದೇವಸ್ಥಾನ ಮಂಡಳಿಗೆ ಅಧ್ಯಕ್ಷರಾಗಿ ಭೂಮನ ಕರುಣಾಕರ ರೆಡ್ಡಿ ನೇಮಕ
Advertisement
Advertisement
ಜನರಿಗೆ ಚಿರಪರಿಚಿತರಾಗಿದ್ದ ಲೋಕೇಶ್ ಕಾನ್ ಬೈಲ್ ಗ್ರಾಮದ ತೋಟದಲ್ಲಿ ಮರದ ಕೆಲಸ ಮಾಡುವ ವೇಳೆ ಲೋ ಬಿಪಿಯಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ಇಂದು ಭಾನುವಾರ ಆಗಿದ್ದ ಕಾರಣ ಮನೆಯಲ್ಲೇ ಇದ್ದ ಲೋಕೇಶ್ ಮನೆಯ ಸಮೀಪದಲ್ಲಿದ್ದ ತೋಟಕ್ಕೆ ತೆರಳಿ ಮಾವಿನ ಮರದ ಮೇಲೆ ಹತ್ತಿ ಮರಕ್ಕೆ ಕಸಿ ಮಾಡಲು ಸುಮಾರು 40 ಅಡಿ ಎತ್ತರಕ್ಕೆ ಏರಿದ್ದರು. ಮರದ ತುದಿಗೆ ಹತ್ತಿದ್ದ ಸಂದರ್ಭ ಬಿಪಿ ಲೋ ಆಗಿದೆ. ಇದನ್ನೂ ಓದಿ: ಕನಸು ಭಗ್ನಗೊಂಡ ಹೆಚ್‌ಡಿಕೆ, ಭಗ್ನಪ್ರೇಮಿಯಂತೆ ವ್ಯಾಘ್ರರಾಗಿದ್ದಾರೆ: ದಿನೇಶ್ ಗುಂಡೂರಾವ್ ತಿರುಗೇಟು
Advertisement
ಈ ವೇಳೆ ತಮ್ಮೊಂದಿಗಿದ್ದ ಸಹೋದರನ ಬಳಿ ಶುಗರ್ ಲೆವೆಲ್ ಡೌನ್ ಆಗುತ್ತಿದೆ. ಮನೆಗೆ ಹೋಗಿ ಸ್ವಲ್ಪ ಸಕ್ಕರೆ ತರುವಂತೆ ಸೂಚಿಸಿದ್ದಾರೆ. ಸಹೋದರ ಮನೆಗೆ ತೆರಳಿ ಸಕ್ಕರೆ ತರುವ ಹೊತ್ತಿಗೆ ಲೋಕೇಶ್ ಮರದಿಂದ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇವರ ಕೈ ಮತ್ತು ಕಾಲಿನ ಮೂಳೆ ಮುರಿದಿದೆ. ತಕ್ಷಣವೇ ಇವರನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಿದರೂ ಮಾರ್ಗಮಧ್ಯೆ ಲೋಕೇಶ್ ಕೊನೆಯಿಸಿರೆಳೆದಿದ್ದಾರೆ. ಇವರ ಪಾರ್ಥಿವ ಶರೀರವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
Advertisement
ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಗುರುತಿಸಿಕೊಂಡಿದ್ದ ಲೋಕೇಶ್ ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಅಪ್ಪಚ್ಚು ರಂಜನ್ ಕೆ.ಜಿ.ಬೋಪಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾತಾಡಿದ ಅಪ್ಪಚ್ಚು ರಂಜನ್, ತನ್ನೊಂದಿಗೆ ಸುಮಾರು 10 ವರ್ಷಗಳಿಂದ ಲೋಕೇಶ್ ಗನ್‌ಮ್ಯಾನ್ ಆಗಿ ಕೆಲಸ ಮಾಡಿದ್ದರು. ಬರೀ ಗನ್‌ಮ್ಯಾನ್ ಅಲ್ಲದೇ ಪಿಎ ರೀತಿಯಲ್ಲಿ ಅವರು ಕೆಲಸ ಮಾಡಿದ್ದರು. ಬಹಳ ಬುದ್ದಿವಂತರಾಗಿದ್ದು, 2018 ರಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ಮೊದಲು ಅವರು ರಸ್ತೆಗಳಲ್ಲಿ ಹೋಗಿ ಸುರಕ್ಷಿತವಾಗಿದೆಯಾ ಇಲ್ವಾ ಎಂದು ನೋಡಿ ನಂತರ ನನ್ನನ್ನು ಬರಲು ಹೇಳುತ್ತಿದ್ದರು. ಒಂದು ರೀತಿಯ ಕುಟುಂಬದ ಸದಸ್ಯನ ರೀತಿಯಲ್ಲಿ ನನ್ನೊಂದಿಗೆ ಇದ್ದರು. ಆದರೆ ಇವತ್ತು ಮರ ಕಸಿ ಮಾಡಲು ಹೋಗಿ ಮೃತಪಟ್ಟಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದರು. ಅಲ್ಲದೇ ಪೊಲೀಸ್ ಇಲಾಖೆ ಸಿಬ್ಬಂದಿ ಲೋಕೇಶ್ ಸಾವನ್ನು ನೆನೆದು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಸಂಘರ್ಷ – ಕಳೆದ 24 ಗಂಟೆಗಳಲ್ಲಿ ಆರು ಮಂದಿ ಸಾವು