ಚೆನ್ನೈ: ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ತೆರಳಿದ ಪೊಲೀಸ್ ಕಾನ್ಸ್ ಸ್ಟೇಬಲ್ (Police Constable) ನನ್ನೇ ಕುಡುಕರಿಬ್ಬರು ಥಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿ (Kanyakumari) ಯಲ್ಲಿ ನಡೆದಿದೆ.
ಆರೋಪಿಗಳನ್ನು ಸ್ವರ್ಣರಾಜ್ ಹಾಗೂ ಜೆರಿನ್ ಎಂದು ಗುರುತಿಸಲಾಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಕದ್ದ ಹಾಡು: ಪಾಕಿಸ್ತಾನಿ ಗಾಯಕನ ವಿಡಿಯೋ
ಕುಡುಕರಿಬ್ಬರು ಮಾನಸಿಕ ಅಸ್ವಸ್ಥನ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಕಾನ್ಸ್ ಸ್ಟೇಬಲ್ ಅವರು ಆತನನ್ನು ಕುಡುಕರಿಂದ ರಕ್ಷಿಸಲು ತೆರಳಿದ್ದಾರೆ. ಇದರಿಂದ ಮತ್ತೆ ರೊಚ್ಚಿಗೆದ್ದ ಕುಡುಕರು ಪೊಲೀಸ್ (Police) ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.
ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದನ್ನು ಗಮನಿಸಿದ ವಾಹನಸವಾರರು ಕೂಡಲೇ ಮಧ್ಯಪ್ರವೇಶ ಮಾಡಿದ್ದಾರೆ. ಅಲ್ಲದೆ ಕುಡುಕರಿಗೇ ಥಳಿಸಿದ್ದಾರೆ. ಸದ್ಯ ಮೂವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಆರೋಪಿಗಳ ವಿರುದ್ಧ ಕೀರಿಪಾರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.