ಬೈಕ್ ಅಡ್ಡ ಹಾಕಿ ಪೊಲೀಸ್ ಪೇದೆಗೆ ಹಿಗ್ಗಾಮುಗ್ಗ ಥಳಿತ- ಆರೋಪ

Public TV
1 Min Read
POLICE 1

ಯಾದಗಿರಿ: ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ಅಡ್ಡ ಹಾಕಿ ಜಿಲ್ಲಾ ಮೀಸಲು ಪಡೆಯ (ಡಿಆರ್) ಪೇದೆಯ (Police Constable) ಮೇಲೆ ಹಿಗ್ಗಾಮುಗ್ಗ ಥಳಿಸಿದ ಆರೋಪ ಯಾದಗಿರಿಯಿಂದ (Yadgir) ಕೇಳಿಬಂದಿದೆ.

ಹಲ್ಲೆಗೊಳಗಾದ ಡಿಆರ್ ಪೇದೆಯನ್ನು ಗುರಪ್ಪ ಎಂದು ಗುರುತಿಸಲಾಗಿದೆ. ನಗರದ ಆರ್‌ಟಿಒ ಕಚೇರಿ ಬಳಿ ಮಂಗಳವಾರ ತಡ ರಾತ್ರಿ ಅಂಬಣ್ಣ ನಾಯಕ, ರೌಡಿ ಶೀಟರ್ ತೇಜ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ಪರಿಣಾಮ ಪೇದೆಯ ಬಾಯಲ್ಲಿ ಗಾಯವಾಗಿದ್ದು, ರಕ್ತ ಸಹ ಬಂದಿದೆ. ಹಳೆಯ ದ್ವೇಷದಿಂದ ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 22 ಮಂದಿಯಲ್ಲಿ ಕೊರೊನಾ ದೃಢ- ಇದುವರೆಗೆ ಮೂವರು ಸಾವು

ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಅಂಬಣ್ಣ ಪ್ರತಿಕ್ರಿಯೆ ನೀಡಿದ್ದು, ಪೇದೆ ಗುರಪ್ಪ ಕುಡಿದ ನಶೆಯಲ್ಲಿ ಬೈಕ್‍ನಿಂದ ಬಿದ್ದಿದ್ದರು. ಈ ಕಾರಣಕ್ಕೆ ಅವರನ್ನು ಎಬ್ಬಿಸಲು ಹೋಗಿದ್ದೆವು. ಈ ವೇಳೆ ನನ್ನ ಕೈ ಮತ್ತು ಕಾಲಿಗೆ ಕಚ್ಚಿದ್ದಾರೆ. ಇದೇ ಕಾರಣಕ್ಕೆ ಒಂದೇಟು ಹೊಡೆದಿದ್ದೇನೆ ಎಂದು ಹೇಳಿದ್ದಾರೆ.

ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಪ್ರಿಯಾಂಕಾ ಖರ್ಗೆ ಧರ್ಮ ದ್ರೋಹಿ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ: ಈಶ್ವರಪ್ಪ

Share This Article