ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತು ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ (Hubballi) ನವನಗರದ ಶಿವಾನಂದ ನಗರದಲ್ಲಿ ನಡೆದಿದೆ.
ಧಾರವಾಡ ಸಂಚಾರಿ ಠಾಣೆಯ ಕಾನ್‌ಸ್ಟೇಬಲ್ ಮಹೇಶ್ ಹೆಸರೂರ್ (31) ಮತ್ತು ವಿಜಯಲಕ್ಷ್ಮೀ ವಾಲಿ (30) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಕಾನ್‌ಸ್ಟೇಬಲ್ ಮಹೇಶ್, ಮದುವೆ ಆಗಿದ್ದರೂ ವಿವಾಹಿತ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವೇ ಆತ್ಮಹತ್ಯೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ
ಮೃತ ಮಹೇಶ್ ಈಗಾಗಲೇ ಬೇರೆ ಹುಡುಗಿ ಜೊತೆಗೆ ಮದುವೆ ಆಗಿದ್ದ. ಹೀಗಿದ್ದರೂ ವಿಜಯಲಕ್ಷ್ಮಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಹೆಂಡತಿ ಬಿಟ್ಟು ವಿಜಯಲಕ್ಷ್ಮಿಯೊಂದಿಗೆ ಕಳೆದ 15 ದಿನದಿಂದ ಬೇರೆ ಮನೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ವಿಜಯಲಕ್ಷ್ಮಿ ಜೊತೆಗೆ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ವಿಜಯಲಕ್ಷ್ಮಿ ಶನಿವಾರ ರಾತ್ರಿ ಮನೆಯಿಂದ ಹೋಗಿದ್ದಳು. ಹನುಮಂತನಗರದಲ್ಲಿ ವಿಜಯಲಕ್ಷ್ಮಿ ವಾಸವಿದ್ದಳು. ವಿದ್ಯಾನಗರದ ಚೇತನ ಕಾಲೇಜು ಎದುರಿಗೆ ಪಡ್ಡು ಮಾರಿ ಜೀವನ ನಡೆಸುತ್ತಿದ್ದಳು. ವಿಜಯಲಕ್ಷ್ಮಿ ಈಗಾಗಲೇ ಲವ್ ಮ್ಯಾರೇಜ್ ಮಾಡಿಕೊಂಡಿದ್ದಳು ಎರಡು ಮಕ್ಕಳು ಸಹ ಇವೆ. ನಾಲ್ಕು ವರ್ಷ ಹಿಂದೆ ವಿಜಯಲಕ್ಷ್ಮಿ ಗಂಡನ ಜೊತೆಗೆ ಜಗಳ ಮಾಡಿಕೊಂಡು ದೂರುವಾಗಿದ್ದಳು. ಕಾನ್‌ಸ್ಟೇಬಲ್ ಬಗ್ಗೆ ನನಗೇನು ಗೊತ್ತಿಲ್ಲ. ಅವಳು ಇಲ್ಲಿಗೆ ಯಾಕೆ ಬಂದಿದ್ದಿದಾಳೆ? ಕಾನ್‌ಸ್ಟೇಬಲ್ ಜೊತೆಗೆ ಏನು ಸಂಬಂಧ ಅಂತ ಗೊತ್ತಿಲ್ಲ ಎಂದು ಆಕೆ ಸಹೋದರಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸ್ಫೋಟಕ ತಿರುವು- ವೈದ್ಯರಿಬ್ಬರು ಭಾಗಿಯಾಗಿರೋ ಶಂಕೆ