ಬೆಂಗಳೂರು: ಪೊಲೀಸ್ ಪೇದೆಯೊಬ್ಬ ವಿಧಾನಸೌಧ (Vidhanasoudha) ದೊಳಗೆ ಎಣ್ಣೆ ಬಾಟ್ಲಿ ತಂದು ಫಜೀತಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.
Advertisement
ಹೌದು. ಕೆಂಗಲ್ ಗೇಟ್ (Kengal Gate) ಬಳಿ ಪೊಲೀಸಪ್ಪನ ಎಣ್ಣೆ ಬಾಟ್ಲಿ ಪುರಾಣ ನಡೆದಿದೆ. ವಿಧಾನಸೌಧ ಒಳಗಡೆಯಿಂದ ಹೊರೆಗೆ ಹೋಗುತ್ತಿದ್ದ ಮಫ್ತಿಯಲ್ಲಿದ್ದ ಪೊಲೀಸ್ ಪೇದೆ, ಬ್ಯಾಗ್ ನಲ್ಲಿ ಮದ್ಯದ ಬಾಟ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಹೊರಗೆ ಹೋಗುವಾಗ ಬಾಟ್ಲಿ ಕೈ ಜಾರಿ ಬಿದ್ದಿದೆ. ಪರಿಣಾಮ ಪೀಸ್ ಪೀಸ್ ಆಗಿದೆ. ಆತುರವಾಗಿ ಚೂರಾದ ಬಾಟ್ಲಿ ಪೀಸ್ ಎತ್ತಿಕೊಂಡು ಪೇದೆ ಅಲ್ಲಿಂದ ಹೋಗಿದ್ದಾರೆ.
Advertisement
Advertisement
ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಮಾಧ್ಯಮದವರು ಸ್ಥಳಕ್ಕೆ ತೆರಳಿದ್ದು, ಕ್ಯಾಮೆರಾ ಕಂಡ ಕೂಡಲೇ ಪೊಲೀಸ್ ಪೇದೆ ವಿಧಾನಸೌಧದಿಂದ ಪರಾರಿಯಾಗಿದ್ದಾರೆ. ಸದ್ಯ ವಿಧಾನಸೌಧ ಭದ್ರತೆ ಪೊಲೀಸರು, ಬಾಟ್ಲಿ ತಂದ ಪೊಲೀಸ್ ಪೇದೆ ಯಾರು ಅಂತ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಬೇಕು- ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
Advertisement
ಹಾಗಾದ್ರೆ ವಿಧಾನಸೌಧಕ್ಕೆ ಮದ್ಯದ ಬಾಟ್ಲಿ ಬಂದಿದ್ದು ಹೇಗೆ?, ಭದ್ರತೆ ತಪ್ಪಿಸಿ ಮದ್ಯದ ಬಾಟ್ಲಿ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?, ವಿಧಾನಸೌಧದ ಒಳಗಿಂದ ಮದ್ಯದ ಬಾಟ್ಲಿ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದರು..?, ಪೊಲೀಸರೇ ಹೀಗೆ ಮಾಡಿದ್ರೆ ವಿಧಾನಸೌಧಕ್ಕೆ ರಕ್ಷಣೆ ಹೇಗೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.