ಬ್ರೆಜಿಲ್: ವಿಮಾನವೊಂದು ಎಂಜಿನ್ ವೈಫ್ಯಲ್ಯದಿಂದ ನೇರವಾಗಿ ರಸ್ತೆಗೆ ಲ್ಯಾಂಡ್ ಆಗಿರುವ ಘಟನೆ ಬ್ರೆಜಿಲ್‌ನ (Brazil) ಸಾಂತಾ ಕ್ಯಾಟರಿನಾದಲ್ಲಿ (Santa Catarina) ನಡೆದಿದೆ.
🇧🇷 SMALL PLANE MAKES EMERGENCY LANDING ON BRAZIL’S BR-101 — NO INJURIES
A small plane made a dramatic emergency landing on Brazil’s BR-101 highway, gliding between moving cars in Garuva, Santa Catarina.
The single-engine aircraft, a Pelican 500 BR, touched down safely after… pic.twitter.com/k51EJkBqnA
— Mario Nawfal (@MarioNawfal) April 5, 2025
ಗೌರಮಿರಿಮ್‌ನಲ್ಲಿರುವ ವಿಮಾನ ನಿಲ್ದಾಣದಿಂದ ಟೇಕ್ ಆಫ್ (Take Off) ಆದ ವಿಮಾನವು ಸ್ಪಲ್ಪ ದೂರ ಹಾರುತ್ತಿದ್ದಂತೆ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ತುರ್ತು ಕ್ರಮವಾಗಿ ಪೈಲಟ್ ಗುರುವದ ಬಿಆರ್-1010 ಹೆದ್ದಾರಿ ಮೇಲೆ ಲ್ಯಾಂಡ್ ಮಾಡಿದ್ದಾರೆ. ಇದನ್ನೂ ಓದಿ: ಒಮನ್‌ನಲ್ಲಿ ವಿಜಯ್, ರಶ್ಮಿಕಾ ಸುತ್ತಾಟ- ಬೀಚ್ ಫೋಟೋದಿಂದ ಸಿಕ್ಕಿಬಿದ್ದ ಜೋಡಿ
ಸಿಂಗಲ್ ಎಂಜಿನ್ ಹೊಂದಿರುವ ಪೆಲಿಕನ್ 500ಬಿಆರ್ ವಿಮಾನದಲ್ಲಿ ಕಾಣಿಸಿಕೊಂಡ ಎಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ
ವಿಮಾನ ತುರ್ತು ಭೂಸ್ಪರ್ಶ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ.