– ಶಿಮ್ಲಾದಲ್ಲಿದ್ದ ಯುವತಿಯನ್ನ ರಕ್ಷಿಸಿದ ಎನ್ ಜಿಓ
ಮೈಸೂರು: ನಗರದಿಂದ ಬೇರೆ ರಾಜ್ಯಕ್ಕೆ ಹೋಗಿದ್ದ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಎರಡು ವರ್ಷದ ಬಳಿಕ ರಕ್ಷಿಸಿ ಪೋಷಕರಿಗೆ ಒಪ್ಪಿಸುವಲ್ಲಿ ಎನ್.ಜಿ.ಓ ಒಂದು ಶ್ರಮಿಸಿದೆ.
ಪಿರಿಯಾಪಟ್ಟಣ ನಿವಾಸಿಯಾಗಿರೋ ಮಾನಸಿಕ ಅಸ್ವಸ್ಥೆ ಎರಡು ವರ್ಷದ ಹಿಂದೆ ಮೈಸೂರಿನಿಂದ ರೈಲು ಹತ್ತಿ ಹೋಗಿದ್ದಳು. ಆದರೆ ಎಲ್ಲಿಗೆ ಹೋಗಿದ್ದಾಳೆ? ಎಲ್ಲಿ ಇದ್ದಾಳೆ? ಎನ್ನುವುದು ಪೋಷಕರನ್ನು ಕಾಡಿತ್ತು. ಕೊನೆಗೆ ಈಕೆ ಶಿಮ್ಲಾದಲ್ಲಿ ಕನ್ನಡ ಮಾತನಾಡುವುದನ್ನು ಗಮನಿಸಿದ ಎನ್‍ಜಿಓ ಒಂದು, ಕರ್ನಾಟಕಕ್ಕೆ ಸಂಪರ್ಕ ಸಾಧಿಸಿತ್ತು.
Advertisement
Advertisement
ಬಳಿಕ ಆಕೆ ಮೈಸೂರಿನ ಪಿರಿಯಾಪಟ್ಟಣದ ನಿವಾಸಿ ಎಂದು ಅರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಕರ್ನಾಕಟದಿಂದ ಶಿಮ್ಲಾಗೆ ಹೋದ ಅಧಿಕಾರಿಗಳ ತಂಡ ಯುವತಿಯನ್ನು ಸುರಕ್ಷಿತವಾಗಿ ಗುರುವಾರ ರಾತ್ರಿ ಬೆಂಗಳೂರಿಗೆ ಕರೆತಂದಿದ್ದರು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬಳಿಕ ಮೈಸೂರಿಗೆ ಬಂದಿದ್ದ ಯುವತಿಯ ಕಣ್ಣಲ್ಲಿ ಸಂತಸ ತುಂಬಿತ್ತು.
Advertisement
ನಂತರ ಮೈಸೂರಿನ ವಿಜಯನಗರದ ಸ್ತ್ರೀ ಸೇವಾನಿಕೇತನ ಮಹಿಳಾನಿಲಯದಲ್ಲಿ ಉಳಿದುಕೊಂಡಿದ್ದು, ಪೋಷಕರು ಬಂದು ತಮ್ಮ ಮನೆಗೆ ಕರೆದೊಯ್ದಿದ್ದಾರೆ.