ಕೊಪ್ಪಳ: ಮನೆಯ ಗೋಡೆ ಹಾರಿ ವಿಕೃತ ಕಾಮಿಯೊಬ್ಬ ಮಹಿಳೆಯರ ಒಳಉಡುಪನ್ನು (Innerwear) ಕಳ್ಳತನ ಮಾಡಿರುವ ಘಟನೆ ಕೊಪ್ಪಳದ (Koppal) ಗಂಗಾವತಿಯಲ್ಲಿ (Gangavathi) ನಡೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರತಿಷ್ಠಿತ ಏರಿಯಾದಲ್ಲಿ ಮಹಿಳೆಯರ ಒಳಉಡಪು ಕಳ್ಳತನ ಮಾಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯ ಗೋಡೆ ಹಾರಿ ವಿಕೃತ ಕಾಮಿ ಮಹಿಳೆಯರ ಒಳ ಉಡುಪು ಕಳ್ಳತನ ಮಾಡಿದ್ದಾನೆ. ಮಹಿಳೆಯರ ಒಳಉಡುಪು ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸೀಮೆಎಣ್ಣೆ ಸರಬರಾಜಿಗೆ ನಿಯಮ ಸಡಿಲಿಸಿದ ಕೇಂದ್ರ; ಪೆಟ್ರೋಲ್ ಪಂಪ್‌ಗಳ ಮೂಲಕ 60 ದಿನಗಳವರೆಗೆ ಮಾರಾಟಕ್ಕೆ ಅವಕಾಶ
ಗಂಗವಾತಿಯ ಸಿಬಿಎಸ್ ಬಡಾವಣೆಯ ಸುತ್ತಮುತ್ತ ಮಹಿಳೆಯರ ಒಳ ಉಡುಪು ಕಳ್ಳತನವಾಗಿದೆ. ಇದರಿಂದಾಗಿ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಏ.1ರಂದು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಜಯಂತ್ಯೋತ್ಸವ – ರಾಷ್ಟ್ರಪತಿ ಮುರ್ಮು ಆಗಮನ

