ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೆಸರಿನಲ್ಲಿ ಫೇಸ್‌ಬುಕ್ ಖಾತೆ (Facebook Account) ತೆರೆದು, ಹಣ ಪಡೆದುಕೊಂಡು ವಂಚಿಸುತ್ತಿದ್ದಾತನನ್ನು ಚಿಕ್ಕಬಳ್ಳಾಪುರ (Chikkaballapura) ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ (Mysuru) ರಾಜೀವ್ ನಗರದ ನಿವಾಸಿ ಕಾರು ಚಾಲಕ ಮುದಾಸೀರ್ ಪಾಷಾ ಬಂಧಿತ ಆರೋಪಿ. ಈತ ‘ಪ್ರದೀಪ್ ಈಶ್ವರ್ ನಿಮ್ಮೊಂದಿಗೆ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಸಹಾಯದ ನೆಪದಲ್ಲಿ ಜನರಲ್ಲಿ ಹಣ ಪೀಕಿಸುತ್ತಿದ್ದ. ಅಲ್ಲದೇ ಕಾಮೆಂಟ್ ಸೆಕ್ಷನ್‌ನಲ್ಲಿ ಸಹಾಯಕ್ಕಾಗಿ ಮನವಿ ಮಾಡಿದವರಿಗೆ ಕರೆ ಮಾಡಿ ವಂಚನೆ ಮಾಡುತ್ತಿದ್ದ. ಇದನ್ನೂ ಓದಿ: ಆಗಸ್ಟ್ 18 ರಂದು ಗೃಹಲಕ್ಷ್ಮಿಯರ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ತಾನು ಪ್ರದೀಪ್ ಈಶ್ವರ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯ ಮಾಡಿಕೊಂಡ ಈತ ಬಳಿಕ ಸಹಾಯ ಮಾಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ಖಾಸಿಂಸಾಬ್ ಎಂಬವರು ತಾನು ಬಡವನಾಗಿದ್ದು, ಶಾಸಕರ ಕಡೆಯಿಂದ ಏನಾದರೂ ಸಹಾಯ ಮಾಡುವಂತೆ ಕೇಳಿದ್ದಾರೆ. ಈ ವೇಳೆ ಪಾಷಾ ತನಗೆ 5,000 ರೂ. ಫೋನ್ ಪೇ ಮಾಡಿದರೆ ನಿಮಗೆ ಶಾಸಕರ ಕಡೆಯಿಂದ 4 ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿ ಖಾಸಿಂ ಹಣ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆಯ ಬಳಿಕ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಖಾಸಿಂ ಅವರಿಗೆ ತಾನು ವಂಚನೆಗೊಳಗಾಗಿರುವುದು ಅರಿವಾಗಿದೆ. ಇದನ್ನೂ ಓದಿ: ವಿಜಯೇಂದ್ರ ಮಿಲ್‌ನಲ್ಲಿ ಇದೆಯಾ ಅಷ್ಟು ಅಕ್ಕಿ?: ಸಿಎಂ ಸಿದ್ದರಾಮಯ್ಯ ತಿರುಗೇಟು
Advertisement
ಇನ್ನೂ ಈ ಆರೋಪಿ ಮುದಾಸೀರ್ ಪಾಷಾ ಕೇವಲ ಪ್ರದೀಪ್ ಈಶ್ವರ್ ಹೆಸರು ಅಷ್ಟೇ ಅಲ್ಲದೇ ಖ್ಯಾತ ನಟ ಸೋನುಸೂದ್, ಹಾಗೂ ರಾಜಕೀಯ ಮುಖಂಡರಾದ ಕೆ ಜಿ ಎಫ್ ಬಾಬು, ಸಚಿವ ಜಮೀರ್ ಅಹಮದ್ ಹೆಸರಿನಲ್ಲೂ ಸಹ ದೋಖಾ ಮಾಡಿರೋದು ಪೊಲೀಸರ ತನಿಖೆ ವೇಳೆ ಬಯಲಾಗಿದೆ, ಸದ್ಯ ಮುದಾಸೀರ್ ಪಾಷಾ ಮಾಡಿದ ತಪ್ಪಿಗೆ ಚಿಕ್ಕಬಳ್ಳಾಪುರದ ಅಣಕನೂರು ಜೈಲು ಸೇರಿ ಕಂಬಿ ಎಣಿಸುವಂತಾಗಿದೆ. ಇದನ್ನೂ ಓದಿ: `ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ – ಸೈಬರ್ ಕಳ್ಳರಿದ್ದಾರೆ ಎಚ್ಚರ!
Advertisement
ಅದೇ ರೀತಿ ಯಶೋಧ, ವಸಂತ, ಮೊಹುದ್ದೀನ್, ಜಯಶ್ರೀ ಎಂಬವರಿಗೂ ಈತ ವಂಚಿಸಿದ್ದು, ಜನರಿಗೆ ವಂಚಿಸುತ್ತಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ವಿನಯ್ ಕುಮಾರ್ ದೂರು ನೀಡಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ – ಡಿಕೆ ಸುರೇಶ್ ವೈರಾಗ್ಯದ ಮಾತು