ನವದೆಹಲಿ: ನಿವೃತ್ತಿ ಹೊಂದಿರುವ ಅಥವಾ ತನ್ನ ವೃತ್ತಿ ಜೀವನದಿಂದ ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.
ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ನೀಡಿದ್ದ ಉಚಿತ ಕೊಡುಗೆಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ರಮಣ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ಸ್ಥಾಪಿಸಬೇಕು ಎಂಬ ವಿಚಾರ ಬಂದಾಗ ಹಿರಿಯ ವಕೀಲ ವಿಕಾಸ್ ಸಿಂಗ್, ಇಂತಹ ಸಮಿತಿಗೆ ನ್ಯಾ. ಲೋಧಾ ಅವರಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವ ವಹಿಸಬೇಕು ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್
ಈ ವೇಳೆ ನಿವೃತ್ತರಾಗುವ ಅಥವಾ ನಿವೃತ್ತಿಯಾಗಲಿರುವ ವ್ಯಕ್ತಿಗೆ ಈ ದೇಶದಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ಸಿಜೆಐ ರಮಣ ಉತ್ತರ ನೀಡಿದರು. ಸಿಜೆಐ ರಮಣ ಇನ್ನೆರಡು ದಿನಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ರಮಣ ಅವರು 2014ರ ಫೆಬ್ರವರಿ 17 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. 2021ರ ಏಪ್ರಿಲ್ 24 ರಂದು ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡ ಇವರು ಆಗಸ್ಟ್ 26 ರಂದು ನಿವೃತ್ತರಾಗಲಿದ್ದಾರೆ.