BellaryDistrictsKarnatakaLatest

ಪತ್ನಿ ಕೊಲೆ ಮಾಡಿ ಜೈಲು ಸೇರಿ ಪೆರೋಲ್ ಪಡೆದು ಮತ್ತೊಂದು ಮದ್ವೆಯಾಗಿ 6 ವರ್ಷದ ನಂತ್ರ ಸಿಕ್ಕಿಬಿದ್ದ!

ಬಳ್ಳಾರಿ: ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದ ಖೈದಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಆಚೆಗೆ ಬಂದ ಮೇಲೆ ಮತ್ತೊಂದು ಮದುವೆಯಾಗಿ ಸಿಕ್ಕಿಬಿದ್ದಿದ್ದಾನೆ.

ಹೆಸರು ಬದಲಿಸಿಕೊಂಡು ಪೊಲೀಸರಿಗೆ ಬರೋಬ್ಬರಿ 7 ವರ್ಷಗಳ ಕಾಲ ಚಳ್ಳೆಹಣ್ಣು ತಿನಿಸಿದ್ದ ಖೈದಿಯನ್ನು ಬಂಧಿಸುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಪೊಲೀಸರು ಎದ್ನೋ ಬಿದ್ನೋ ಎಂಬಂತೆ ಕರ್ತವ್ಯ ನಿರ್ವಹಿಸಿ ಖೈದಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ರಾಯನಾಳ ಗ್ರಾಮದ ಗೋವಿಂದ ನಾಯ್ಕ್ ಎನ್ನುವ 33 ವರ್ಷದ ವ್ಯಕ್ತಿ 2009ರಲ್ಲಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಕ್ಕೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು, ಆದರೆ ಖೈದಿ ಗೋವಿಂದನಾಯ್ಕ್ 2011ರಲ್ಲಿ ತಂದೆ ನೋಡುವ ನೆಪದಲ್ಲಿ ಪೆರೋಲ್ ಮೇಲೆ ಆಗಮಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದನು.

ಪರಾರಿಯಾದ ಬಳಿಕ ಆಂಧ್ರ- ತೆಲಗಾಂಣದಲ್ಲಿ ತೆಲೆಮರೆಸಿಕೊಂಡು ಮತ್ತೊಬ್ಬಳನ್ನು ಮದುವೆಯಾಗಿ ಸಂಸಾರ ಮಾಡುತ್ತಿದ್ದ. ಆದರೆ ಖೈದಿಯನ್ನು ಪತ್ತೆ ಮಾಡುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಹಗರಿಬೊಮ್ಮನಹಳ್ಳಿ ಪೊಲೀಸ್ ತಂಡ ರಚಿಸಿಕೊಂಡು ಖೈದಿಯನ್ನು ಬಂಧಿಸಿ ಕರೆ ತಂದಿದ್ದಾರೆ.

ತೆಲಗಾಂಣದಲ್ಲಿ ಸಂತೋಷ ಜಾಧವ ಎನ್ನುವ ಹೆಸರಿನಲ್ಲಿ ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಮಾಡಿಸಿಕೊಂಡು ಆರಾಮ ಆಗಿ ಜೀವನ ಸಾಗಿಸುತ್ತಿದ್ದ ಗೋವಿಂದ ನಾಯ್ಕ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುವ ವೇಳೆಯಲ್ಲಿ ಪರಾರಿಯಾಗಿ ಮತ್ತೊಂದು ಮದುವೆ ಮಾಡಿಕೊಂಡು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಇದೀಗ ಮತ್ತೆ ಜೈಲಿಗೆ ಅಟ್ಟಿದ್ದಾರೆ.

Leave a Reply

Your email address will not be published. Required fields are marked *

Back to top button