ಮಂಗಳೂರು: ಕಡಲನಗರಿ ಹೃದಯಭಾಗ ಹಂಪನಕಟ್ಟೆಯಲ್ಲಿನ ಜನರು ಬೆಚ್ಚಿಬಿದ್ದಿದ್ರು. ಅಲ್ಲಿ ಹಾಡಹಗಲೇ ಚೂರಿ ಇರಿದು ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯಿಂದ ಜುವೆಲ್ಲರಿ (Jewellery) ಕೆಲಸಗಾರನ ಕೊಲೆಯಾಗಿದೆ. ಈ ಕೊಲೆಯ ಹಿಂದೆ ಹತ್ತಾರು ಅನುಮಾನಗಳ ಹುಟ್ಟಿಕೊಂಡಿದೆ.
Advertisement
ಹೌದು ಮಂಗಳೂರಿನ ಹೃದಯಭಾಗ ಹಂಪನಕಟ್ಟೆ ಶುಕ್ರವಾರ ಸಂಜೆ ವೇಳೆಗೆ ಒಂದು ಕ್ಷಣ ಆತಂಕಕ್ಕೀಡಾಗಿತ್ತು. ಹಾಡಹಗಲೇ ವ್ಯಕ್ತಿಯ ಮೇಲೆ ಚೂರಿ ಇರಿತವಾಗಿತ್ತು. ರಾಘವೇಂದ್ರ ಆಚಾರ್ ಎಂಬವರು ಹಂಪನಕಟ್ಟೆ (Hampanakatte) ಯಲ್ಲಿನ ಮಂಗಳೂರು ಜುವೆಲ್ಲರ್ಸ್ ನಲ್ಲಿ ಕಳೆದ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದರು. ಈ ಅಂಗಡಿಯ ಮಾಲೀಕ ಕೇಶವ ಆಚಾರ್ ಪ್ರತಿದಿನ ಮಧ್ಯಾಹ್ನ ರಾಘವೇಂದ್ರನನ್ನು ಒಬ್ಬನನ್ನೇ ಬಿಟ್ಟು ಮನೆಗೆ ಹೋಗಿ ಬರುತ್ತಿದ್ದರು.
Advertisement
Advertisement
ಇಂದು ಕೂಡ ಹಾಗೆ ಹೋಗಿದ್ದಾರೆ. ಹೋಗಿ ವಾಪಸ್ ಬಂದಾಗ ಅವರ ಪಾರ್ಕಿಂಗ್ ನಲ್ಲಿ ಯಾರೋ ಬೈಕ್ ನಿಲ್ಲಿಸಿ ಹೋಗಿದ್ದಾರೆ. ತಕ್ಷಣ ರಾಘವೇಂದ್ರಗೆ ಕರೆ ಮಾಡಿದ್ದಾರೆ. ಆ ಕಡೆ ರಾಘವೇಂದ್ರ ತನಗೆ ಯಾರೋ ಚೂರಿ ಹಾಕಿದ್ದಾರೆ ಅಂತಾ ಹೇಳಿದ್ದಾರೆ. ತಕ್ಷಣ ಜುವೆಲ್ಲರಿ ಬಳಿ ಹೋಗಿ ಬಾಗಿಲು ತೆಗೆದಾಗ ಹೆಲ್ಮೆಟ್ ಮತ್ತು ಮಾಸ್ಕ್ (Mask) ಹಾಕಿದ ಅಪರಿಚಿತ ವ್ಯಕ್ತಿ ಅಲ್ಲಿಂದ ಹೊರಬಂದು ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರನನ್ನು ವೆನ್ಲಾಕ್ ಆಸ್ಪತ್ರೆ (Wenlock Hospital) ಗೆ ರವಾನಿಸಿಲಾಗಿದೆ. ಆದ್ರೆ ಅಷ್ಟೋತ್ತಿಗೆ ರಾಘವೇಂದ್ರ ಆಚಾರ್ ಸಾವನ್ನಪ್ಪಿದ್ರು. ಇದನ್ನೂ ಓದಿ: ಅಖಿಲೇಶ್ ಯಾದವ್ ಬೆಂಗಾವಲು ಪಡೆಯ 6 ಕಾರುಗಳ ಸರಣಿ ಅಪಘಾತ – ನಾಲ್ವರಿಗೆ ಗಂಭೀರ ಗಾಯ
Advertisement
ಆರೋಪಿ ಜುವೆಲ್ಲರಿ ಶಾಪ್ ಒಳಹೋಗಿ ಅರ್ಧ ಗಂಟೆ ಇರೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಒಳಗೆ ಹೋದ ನಂತರ ಏನಾಯ್ತು ಅನ್ನೊದು ಗೊತ್ತಾಗಿಲ್ಲ. ಆದ್ರೆ ಶೋಕೇಸ್ ನಲ್ಲಿ ಇಟ್ಟಿದ್ದ ಕೆಲ ಚಿನ್ನಾಭರಣಗಳು ನಾಪತ್ತೆಯಾಗಿರೋದು ಕಂಡುಬಂದಿದೆ. ಅಲ್ಲದೇ 15 ಗ್ರಾಂ ಚೈನ್ ಮತ್ತು ಉಂಗುರದ ಬಗ್ಗೆ ರಫ್ ಸ್ಕೆಚ್ ಬರೆದಿದ್ದು ಕೂಡ ಅಲ್ಲಿ ಸಿಕ್ಕಿದೆ. ಹೀಗಾಗಿ ಯಾರು ಯಾಕಾಗಿ ಕೊಲೆ ಮಾಡಿದ್ದಾರೆ ಅನ್ನೋದು ಗೊತ್ತಾಗಿಲ್ಲ.
ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆ (Mangaluru Uttara Police Station) ಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಚಿನ್ನಾಭರಣ ಕದಿಯೊ ಸಲುವಾಗಿ ಈ ಕೊಲೆ ನಡೀತಾ. ಇಲ್ಲ ಕೊಲೆಯ ಹಿಂದೆ ಬೇರೆ ಕಾರಣ ಇದ್ಯಾ ಅನ್ನೊದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k