Connect with us

Chikkaballapur

ಅಕ್ರಮ ಖಾತೆ ಮಾಡಿಕೊಡಲಿಲ್ಲ ಅಂತ ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ

Published

on

– ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಚಿಕ್ಕಬಳ್ಳಾಪುರ: ಅಕ್ರಮ ಖಾತೆ ಮಾಡಿಕೊಡಲಿಲ್ಲ ಅಂತ ವ್ಯಕ್ತಿಯೋರ್ವ ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಇಂದು ನಡೆದಿದೆ.

ಪ್ರಭಾರಿ ಚಿಂತಾಮಣಿ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಆರ್ ಐ ರವಿಚಂದ್ರ ಹಲ್ಲೆಗೊಳಗಾಗಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಮಾಡಿಕೆರೆ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ಈ ಹಿಂದೆ ಮಾಡಿಕೆರೆ ಗ್ರಾಮ ವ್ಯಾಪ್ತಿಯ ಗ್ರಾಮ ನಿರೀಕ್ಷಕ (ವಿಐ) ಆಗಿದ್ದ ರವಿಚಂದ್ರಗೆ ವಿವಾದಿತ ಜಮೀನನ್ನು ಖಾತೆ ಮಾಡಿಕೊಡುವಂತೆ ನಾರಾಯಣಸ್ವಾಮಿ ಪಟ್ಟುಹಿಡಿದಿದ್ದನಂತೆ. ಆದ್ರೆ ವಿವಾದಿತ ಜಮೀನು ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ರವಿಚಂದ್ರ ಖಾತೆ ಮಾಡಿಕೊಟ್ಟಿರಲಿಲ್ಲ.

ಇಂದು ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಜನಸಮಾನ್ಯರಿಂದ ದೂರು ಸ್ವೀಕಾರ ಮಾಡುತ್ತಿದ್ದ ಕಾರಣ ಅಲ್ಲಿಗೆ ಬಂದ ನಾರಾಯಣಸ್ವಾಮಿ ಆರ್ ಐ ಖಾತೆ ಮಾಡಿಕೊಡುತ್ತಿಲ್ಲ ಅಂತ ದೂರು ನೀಡಿದ್ದಾನೆ.

ಈ ವೇಳೆ ಆರ್ ಐ ರನ್ನ ಬರ ಹೇಳುವಂತೆ ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ನೀನು ತಾಲೂಕು ಕಚೇರಿಗೆ ಬಾ ಅಂತ ಖುದ್ದು ನಾರಾಯಣಸ್ವಾಮಿ ಯೇ ಫೋನ್ ಮಾಡಿ ಕರೆದಿದ್ದಾನೆ. ಈ ವೇಳೆ ಕಚೇರಿಗೆ ಬಂದ ರವಿಚಂದ್ರ ಹಾಗೂ ನಾರಾಯಣಸ್ವಾಮಿ ನಡುವೆ ಮಾತಿಕ ಚಕಮಕಿ ನಡೆದು ರವಿಚಂದ್ರ ಗೆ ನಾರಾಯಣಸ್ವಾಮಿ ಕಪಾಳಮೋಕ್ಷ ಮಾಡಿದ್ದಾರೆ.

ನಾರಾಯಣಸ್ವಾಮಿ ಮೇಲೆ ರವಿಚಂದ್ರ ಸಹ ಹಲ್ಲೆ ಮಾಡುವ ಪ್ರತಿರೋಧ ಒಡ್ಡಿದ್ದು ಇಬ್ಬರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಇಬ್ಬರನ್ನ ಹಿಡಿದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಸಂಬಂಧ ಆರ್ ಐ ರವಿಚಂದ್ರ ಚಿಂತಾಮಣಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಈ ಹಲ್ಲೆಯ ದೃಶ್ಯ ಕಚೇರಿಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

https://www.youtube.com/watch?v=T5HI0fVM5vg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *