ಚಿಕ್ಕೋಡಿ: ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆ (Crocodile) ಬಾಯಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲ್ಲೂಕಿನ ಸದಲಗಾ ಪಟ್ಟಣದ ಬಳಿ ದೂಧಗಂಗಾ ನದಿಯಲ್ಲಿ ನಡೆದಿದೆ.
ಮಹಾದೇವ ಪುನ್ನಪ್ಪ ಖುರೆ (72) ಎಂಬುವರು ಮೊಸಳೆ ಬಾಯಿಗೆ ಸಿಲುಕಿ, ಮೃತಪಟ್ಟಿರುವ ದುರ್ದೈವಿ. ಮೃತ ಮಹಾದೇವ ಪುನ್ನಪ್ಪ ಖುರೆಯವರಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ನದಿ (River) ದಡದಲ್ಲಿ ಕುಳಿತು ಸ್ನಾನ ಮಾಡುತ್ತಿದ್ದರು. ಇದನ್ನೂ ಓದಿ: ನಾವಿಕನಿಲ್ಲದ ದೋಣಿಯಲ್ಲಿ ಮುಳುಗಿದ ಡೆಲ್ಲಿ – ಆರ್‌ಸಿಬಿಗೆ 47 ರನ್‌ಗಳ ಜಯ; ಪ್ಲೇ ಆಫ್ ಕನಸು ಜೀವಂತ!
ಸ್ನಾನ ಮಾಡುತ್ತಿದ್ದ ಸಂಧರ್ಭದಲ್ಲಿ ಮಹಾದೇವ ಖುರೆಯವರನ್ನು ಮೊಸಳೆ ಎಳೆದುಕೊಂಡು ಹೋಗಿ ತೀವ್ರವಾಗಿ ಗಾಯಮಾಡಿದೆ. ಪರಿಣಾಮ ಮಹಾದೇವ ಖುರೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ನದಿಯಲ್ಲಿ ಶವ ಕಂಡ ಬಳಿಕ ಸ್ಥಳೀಯರು ಶವವನ್ನ ಹೊರತೆಗೆದಿದ್ದು ಮರೋಣತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ 2ನೇ ಅತಿದೊಡ್ಡ ಗಾಂಜಾ ಬೇಟೆ – 15 ಕೋಟಿ ಮೌಲ್ಯದ ಗಾಂಜಾ ಸೀಜ್!