ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ಮಲೆನಾಡಿನಲ್ಲಿ ನೆತ್ತರು ಹರಿದಿದೆ. ಸಂಬಂಧಿಕನೇ ವೃದ್ಧ ದಂಪತಿಯನ್ನ ಕೊಂದು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು (Chikmagalur) ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ.
ಬಸಪ್ಪ (65), ಲಲಿತಮ್ಮ (58) ಮೃತ ದುರ್ದೈವಿಗಳು. ತುಮಕೂರು (Tumkur) ಜಿಲ್ಲೆ ಗುಬ್ಬಿ ಮೂಲದ ದಂಪತಿ, ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್
ವೃದ್ಧ ದಂಪತಿಯ ಸಂಬಂಧಿಕನೊಬ್ಬ ಆಗಾಗ್ಗೆ ಹಣಕ್ಕೆ ಪೀಡಿಸುತ್ತಿದ್ದ. ಅದೇ ರೀತಿ ಇಂದು (ಗುರುವಾರ) ಸಹ ಹಣಕ್ಕಾಗಿ ಪೀಡಿಸಿದ್ದಾನೆ, ಹಣ ಕೊಡದಿದ್ದಕ್ಕೆ ದೊಣ್ಣೆಯಿಂದ ಹೊಡೆದು ಇಬ್ಬರನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾದ ICBM ದಾಳಿ – 60 ವರ್ಷಗಳ ಇತಿಹಾಸದಲ್ಲೇ ಯುದ್ಧಕ್ಕೆ ಕ್ಷಿಪಣಿ ಮೊದಲ ಬಳಕೆ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲಂದೂರು ಠಾಣೆ ಪೊಲೀಸರು (Mallandur Police) ಕೊಲೆ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ವಿಕ್ರಂ ಗೌಡನದ್ದು ಫೇಕ್ ಎನ್‌ಕೌಂಟರ್ – ಸಿಎಂ, ಗೃಹ ಸಚಿವರ ವಿರುದ್ಧ ಮಾಜಿ ನಕ್ಸಲ್ ಕಿಡಿ