ಹುಬ್ಬಳ್ಳಿ: ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಮೂರು ವರ್ಷದ ಬಾಲಕನ ಬಾಯಿಗೆ ವೃದ್ಧನೊಬ್ಬ ಮರ್ಮಾಂಗವನ್ನು ಇಟ್ಟ ಘಟನೆ ಧಾರವಾಡದಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಧಾರವಾಡದ ಮಾಳಮಡ್ಡಿ ನಿವಾಸಿ ಮನೋಹರ್ ಕುಲಕರ್ಣಿ ಗಾಂಧಿನಗರದಲ್ಲಿರುವ ಯ್ಯೂರೋ ಕಿಡ್ಸ್ ಪ್ಲೇ ಹೊಂಗೆ ತನ್ನ ಮೊಮ್ಮಗನನ್ನು ಬಿಡಲು ಹೋಗಿದ್ದ. ಈ ವೇಳೆ ಯಾರೂ ಇಲ್ಲದ್ದನ್ನ ಗಮನಿಸಿ ತನ್ನ ವಾಂಛೆಯನ್ನು ತೀರಿಸಿಕೊಂಡಿದ್ದಾನೆ.
Advertisement
ಸಂತ್ರಸ್ತ ಬಾಲಕ ನಡೆದಿದ್ದನ್ನು ಸೋಮವಾರ ರಾತ್ರಿ ಪಾಲಕರಿಗೆ ತಿಳಿಸಿದ್ದಾನೆ. ನಂತರ ಶಾಲೆಗೆ ತೆರಳಿ ಸಿಸಿಟಿವಿ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಈ ಕುರಿತಂತೆ ಮಗುವಿನ ಪಾಲಕರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಸದ್ಯ ವೃದ್ಧನನ್ನು ಬಂಧಿಸಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸುತ್ತಿದ್ದಾರೆ.