ಬೆಂಗಳೂರು: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡಿ ಬೆದರಿಸಿ, ಚಿನ್ನಾಭರಣ ಮತ್ತು ನಗದು ದೋಚುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್‌ವೊಂದನ್ನು (Dacoit Gang) ಸೂರ್ಯನಗರ (Suryanagar) ಪೊಲೀಸರು ಬಂಧಿಸಿದ್ದಾರೆ.
ಸುನೀಲ್ ಹಾವೇರಿ (26), ಸರವಣ ಅಲಿಯಾಸ್ ಚಿಟ್ಟಿ (32), ಕಾಂತರಾಜ (27) ಬಂಧಿತ ಆರೋಪಿಗಳು. ಬೆಂಗಳೂರು (Bengaluru) ಹೊರವಲಯದ ಆನೆಕಲ್ (Anekal) ತಾಲೂಕಿನ ಸೂರ್ಯನಗರ ಪೇಸ್ – 2 ಬಳಿ ಡಕಾಯಿತರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದೋಚಲು ಹೊಂಚು ಹಾಕುತ್ತಿದ್ದ ವೇಳೆ ಸೂರ್ಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಬಿಸಿನೀರು ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಆಂಟಿ!
ಡಕಾಯಿತರು ಮಾರಕಾಸ್ತ್ರಗಳಿಂದ ಜನರನ್ನು ಬೆದರಿಸಿ ಅವರಿಂದ ಮೊಬೈಲ್, ಚಿನ್ನಾಭರಣ ಹಾಗೂ ನಗದನ್ನು ದೋಚುತ್ತಿದ್ದರು. ಆರೋಪಿ ಸುನೀಲ್ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ಆರೋಪಿಯಾಗಿದ್ದ. ಅಲ್ಲದೇ ಅತ್ತಿಬೆಲೆ ನಗರದ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲೂ ಕೊಲೆ ಯತ್ನ, ಡಕಾಯಿತಿ ಸೇರಿದಂತೆ ಹಲವು ಪ್ರಕರಣದ ಆರೋಪಿಯಾಗಿದ್ದ. ಇದನ್ನೂ ಓದಿ: ಗಾಣಗಾಪುರ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿರೌಡಿ ಅಟ್ಟಹಾಸ – ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ
ಇನ್ನೋರ್ವ ಆರೋಪಿ ಸರವಣ ಅಲಿಯಾಸ್ ಚಿಟ್ಟಿ ತಮಿಳುನಾಡಿನ ಹೊಸೂರಿನ ಹುಡ್ಕೋ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ಆರೋಪಿಯಾಗಿದ್ದ. ಮತ್ತೊಬ್ಬ ಆರೋಪಿ ಕಾಂತರಾಜ್ ಡಕಾಯಿತಿ, ರಾಬರಿ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿಯೂ ಆರೋಪಿಯಾಗಿದ್ದ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಮೂವರು ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾವು ಕಚ್ಚಿ ಬಾಲಕಿ ಸಾವು