ಬೆಂಗಳೂರು: ಕಬ್ಬನ್ ಪಾರ್ಕ್ ಗೆ ವಾಕ್ ಬರುವ ಸಾರ್ವಜನಿಕರು ಜೊತೆಗೆ ಇರಲಿ ಅಂತಾ ನಾಯಿಗಳನ್ನು ಕರ್ಕೊಂಡು ಬರೋದು ಕಾಮನ್. ನಾಯಿಗಳನ್ನು ಕೈಯಲ್ಲೇ ಇಟ್ಕೊಂಡ್ರೇ ಓಕೆ. ಕೊಂಚ ಪಾರ್ಕ್‍ನಲ್ಲಿ ಸುತ್ತಾಡ್ಲಿ ಅಂತಾ ಬಿಟ್ರೋ ಪೊಲೀಸ್ ಕೇಸ್ ಹಾಕ್ತಾರೆ ಜೋಕೆ.
ನಿಮ್ಮ ಮುಂದಿನ ನಾಯಿ ಕತ್ತಿಗೆ ಬೆಲ್ಟ್ ಕಟ್ಟಿ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ರೆ ಯಾರು ಕೇಳುವದಿಲ್ಲ. ಆದ್ರೆ ನಾಯಿ ಸ್ವಲ್ಪ ರಿಲ್ಯಾಕ್ಸ್ ಆಗಿ ಓಡಾಡಲಿ ಅಂತಾ ಬೆಲ್ಟ್ ಕೈ ಬಿಟ್ರೆ ನಿಮ್ಮ ಮೇಲೆ ದೂರು ದಾಖಲಾಗೋದು ಗ್ಯಾರೆಂಟಿ. ಕಬ್ಬನ್ ಪಾರ್ಕ್ ನಲ್ಲಿ ವಾಕಿಂಗ್‍ಗೆ ನಾಯಿಗಳನ್ನು ಕರೆದುಕೊಂಡು ಬರೋರು ಫ್ರೀಯಾಗಿ ಸುತ್ತಾಡಲಿ ಅಂತಾ ಬಿಟ್ಟು ಬಿಡ್ತಾರೆ. ಸಾಕಷ್ಟು ನಾಯಿಗಳು ವಿಹಾರಿಗಳ ಮೇಲೆ ಎರಗಿ ಕಚ್ಚಿ ಹಾನಿ ಮಾಡಿವೆ.
Advertisement
ಸಾಕು ನಾಯಿಗಳಿಂದ ಹಾವಳಿಯಿಂದ ಎಚ್ಚೆತ್ತ ತೋಟಗಾರಿಕ ಇಲಾಖೆ ಈಗ ಹೀಗೆ ನಾಯಿ ಬಿಟ್ಟವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ. ಈಗಾಗಲೇ ಇಬ್ಬರ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಸಂಪೂರ್ಣವಾಗಿ ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳನ್ನು ಕರೆದುಕೊಂಡು ಬರೋದು ನಿಷೇಧ ಮಾಡುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸಿದೆ. ಆದ್ರೆ ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಚಿಂತನೆಯನ್ನು ಸದ್ಯ ಕೈ ಬಿಡಲಾಗಿದೆ.