ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ: ಹೊರ ರಾಜ್ಯದ ಯುವತಿ ಹೇಳಿಕೆ ವೀಡಿಯೋ ವೈರಲ್‌

Public TV
1 Min Read
north indian women bengaluru

– ಯುವತಿ ಹೇಳಿಕೆಗೆ ಕನ್ನಡಿಗರ ಆಕ್ರೋಶ

ಬೆಂಗಳೂರು: ಬೆಂಗಳೂರು (Bengaluru) ನಡೆಯುತ್ತಿರುವುದೇ ನಮ್ಮಿಂದ ಹೊರ ರಾಜ್ಯದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿರುವ ವೀಡಿಯೋ ವೈರಲ್‌ ಆಗಿದ್ದು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರನ್ನ ಕೆರಳುವಂತೆ ಉತ್ತರ ಭಾರತೀಯ ಮೂಲದ ಯುವತಿಯ ಹೇಳಿಕೆ ನೀಡಿದ್ದಾಳೆ. ನಿನ್ನೆಯಷ್ಟೇ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ಬಳಿಕ ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೂಡ ಮಾಡಲಾಗಿತ್ತು. ಅದರಂತೆ ಚಾಲಕನ ವಿರುದ್ಧ ಪೊಲೀಸರ ಕ್ರಮ ಕೂಡ ಆಗಿತ್ತು. ಇದನ್ನೂ ಓದಿ: ರಸ್ತೆ ದಾಟುತ್ತಿದ ಮಹಿಳೆಗೆ ಆಟೋ ಡಿಕ್ಕಿ – ಸ್ಥಿತಿ ಗಂಭೀರ

ಈ ಘಟನೆಯನ್ನ ಖಂಡಿಸುವ ಭರದಲ್ಲಿ ಬೆಂಗಳೂರನ ಸ್ಥಳೀಯರ ವಿರುದ್ಧ ಅವಾಚ್ಯ ಶಬ್ದ ಬಳಸಿ ಯುವತಿ ಮಾತನಾಡಿದ್ದಾಳೆ. ‘ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ ಎಂದು ಯುವತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಕರ್ಮ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಯುವತಿ ನಿಂದಿಸಿದ್ದಾಳೆ. ಸದ್ಯ ಯುವತಿಯ ಈ ವೀಡಿಯೋ ವೈರಲ್ ಆಗಿದೆ. ಆಕ್ರೋಶ ವ್ಯಕ್ತವಾದ ಕಾರಣ ವೀಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾಳೆ. ಇದನ್ನೂ ಓದಿ: ಹರಿಯಾಣ ಚುನಾವಣೆ ಸ್ಪರ್ಧೆಗೆ ವಿನೇಶ್‌ ಫೋಗಟ್‌ಗೆ ಕಾಂಗ್ರೆಸ್‌ ಟಿಕೆಟ್‌

Share This Article