ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ (Living Together) ಪ್ರಿಯಮೆಯೊಂದಿಗೆ ತನ್ನ ಗೆಳೆಯ ಸಲುಗೆಯಿಂದ ಇರುತ್ತಿದ್ದನ್ನು ನೋಡಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ನಡೆದಿದೆ.
ನೈಜೀರಿಯ (Nigeria) ಮೂಲದ ಇಬ್ಬರು ವ್ಯಕ್ತಿಗಳ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ಸ್ನೇಹಿತ ಸುಲೇಮಾನ್ (38)ನನ್ನು ಕೊಲೆ ಮಾಡಿರುವ ಆರೋಪಿ ವಿಕ್ಟರ್‌ನನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದಿಂದ ಎಡವಟ್ಟು- ಹಾಲ್ ಟಿಕೆಟ್‍ನಲ್ಲಿ ವಿದ್ಯಾರ್ಥಿನಿ ಫೋಟೋ ಬದಲು ಐಶ್ವರ್ಯ ರೈ ಫೋಟೋ
Advertisement
Advertisement
ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದ. ಆಗಾಗ್ಗೆ ರೂಮಿಗೆ ಬರ್ತಿದ್ದ ಸುಲೇಮಾನ್, ಆತನ ಗೆಳತಿಯ (Girlfriend) ಜೊತೆ ಸಲುಗೆಯಿಂದ ಇರುವುದನ್ನು ನೋಡಿದ್ದಾನೆ. ಇದೇ ಕಾರಣಕ್ಕೆ ಗಲಾಟೆ ಮಾಡಿ ಚಾಕು ತೆಗೆದುಕೊಂಡು ಇರಿದು ಗೆಳೆಯನನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇತ್ತ ಪ್ರಕರಣ (FIR) ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: CJI ಹುದ್ದೆಗೆ ನ್ಯಾಯಮೂರ್ತಿ ಚಂದ್ರಚೂಡ್ ಹೆಸರು ಶಿಫಾರಸು
Advertisement
Advertisement
ವೀಸಾ (Visa), ಪಾಸ್‌ಪೋರ್ಟ್ (PassPort) ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.