Bengaluru City
ಬೆಂಗ್ಳೂರಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆ

ಬೆಂಗಳೂರು: ನಗರದಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.
ನೆಲಗದರನಹಳ್ಳಿಯ ಮಾರಮ್ಮ ದೇವಾಲಯದ ಬಳಿ ನವಜಾತ ಹೆಣ್ಣು ಮಗುವನ್ನ ಬಿಟ್ಟು ಹೋಗಲಾಗಿತ್ತು. ಮಗುವನ್ನ ನೋಡಿ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದರು. ನಂತರ ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗುವನ್ನ ಆಂಬುಲೆನ್ಸ್‍ನಲ್ಲಿ ವಾಣಿವಿಲಾಸ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ಮಾಡಲಾಗ್ತಿದೆ. ಹೆಣ್ಣು ಮಗು ಅನ್ನೋ ಕಾರಣಕ್ಕೆ ಹುಟ್ಟಿದ ಕೂಡಲೇ ತಾಯಿಯೇ ಮಗುವನ್ನ ಬಿಟ್ಟು ಹೋಗಿರಬಹುದು ಎಂದು ಊಹಿಸಲಾಗಿದೆ.
