ತುಮಕೂರು: ತಾಳಿ ಕಟ್ಟುವ ವೇಳೆಯಲ್ಲೇ ವರ ಮಂಟಪದಿಂದ ವರನೇ ನಾಪತ್ತೆಯಾದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ಒಪ್ಪದೆ ನಾಪತ್ತೆಯಾಗಿದ್ದ ಕಲ್ಲೇಗೌಡನ ದೊಡ್ಡಿ ಗ್ರಾಮದ ಶಿವಕುಮಾರ್ ಈಗ ಇದ್ದಕ್ಕಿದ್ದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಭಾನುವಾರ ತಾಲೂಕಿನ ಬಿಳಿದೇವಾಲಯದ ಗ್ರಾಮದ ಯುವತಿ ಜೊತೆ ಶಿವಕುಮಾರ್ ಮದುವೆ ನಿಶ್ಚಯವಾಗಿತ್ತು. ಶನಿವಾರ ಮತ್ತು ಇಂದು ಯಡಿಯೂರಿನ ಹನುಮ್ಮ ತಿಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
Advertisement
ಶಿವಕುಮಾರ ತನ್ನ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದರು. ಆದರೆ ಅತ್ತೆ ಶಿವಕುಮಾರ್ ನಿರುದ್ಯೋಗಿ ಎಂದು ಹೇಳಿ ಮಗಳನ್ನು ಕೊಡಲು ನಿರಾಕರಿಸಿದ್ದರು. ಹೀಗಾಗಿ ಶಿವಕುಮಾರ್ ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
Advertisement
ಕಳೆದ ಮೂರು ದಿನಗಳ ಹಿಂದೆ ಆಮಂತ್ರಣ ಪತ್ರಿಕೆ ನೀಡಲು ಹೋದಾಗ ಅತ್ತೆ ತನ್ನ ಮಗಳನ್ನೇ ಕೊಡುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ಇತ್ತ ಮದುವೆಗೆ ಬಾರದೇ ವರ ಶಿವಕುಮಾರ್ ಯೂ ಟರ್ನ್ ಹೊಡೆದಿದ್ದಾರೆ.