ಬೆಂಗಳೂರು: ಚಂದನವನದ ಕೃಷ್ಣ ಎಂದೇ ಖ್ಯಾತಿವೊಂದಿರುವ ಕೃಷ್ಣ ಅಜಯ್ ರಾವ್ ಅವರ ಭುಜದ ಮೇಲೆ ಕುಳಿತು ಮಗಳು ಚರಿಷ್ಮಾ ಸ್ಕ್ರೀನ್ ಪ್ಲೇ ಬರೆದಿದ್ದಾಳೆ.
ಅಜಯ್ ತನ್ನ ಮುದ್ದು ಮಗಳು ಚರಿಷ್ಮಾ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾರೆ. ಇಂದು ಸಹ ವೀಕೆಂಡ್ ನಲ್ಲಿ ಮಗಳ ಜೊತೆ ಆಟ ಆಡುತ್ತಿರುವ ಅಜಯ್ ರಾವ್ ಇನ್‍ಸ್ಟಾದಲ್ಲಿ ಫೋಟೋ ಮತ್ತು ವೀಡಿಯೋವನ್ನು ಶೇರ್ ಮಾಡಿದ್ದಾರೆ. ಫೋಟೋಗಳಲ್ಲಿ ಅಪ್ಪ-ಮಗಳು ಸಖತ್ ಆಗಿ ಎಕ್ಸ್ಪ್ರೆಷನ್ ಕೊಟ್ಟಿದ್ದು, ಅಭಿಮಾನಿಗಳು ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೋಟೋ ನೋಡಿದ ಅಭಿಮಾನಿಗಳು ‘ಚೆರ್ರಿ ಸೂಪರ್’, ‘ಕ್ಯೂಟ್ ಗರ್ಲ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋಗಳ ಜೊತೆಗೆ ಅಜಯ್ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಚರಿಷ್ಮಾ ಅಪ್ಪನ ಭುಜದ ಮೇಲೆ ಕುಳಿತುಕೊಂಡು ಏನೋ ಬರೆಯುತ್ತಿದ್ದಾಳೆ. ಅದಕ್ಕೆ ಅಜಯ್, ನನ್ನ ತಲೆ ಮೇಲೆ 1 ಹೊಸ ಚಿತ್ರಕಥೆ ಮೂಡ್ತಾ ಇದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
View this post on Instagram
ಈ ವೀಡಿಯೋ ನೋಡಿದ ಅಭಿಮಾನಿಗಳು, ಶುಭವಾಗಲಿ ಚೆರ್ರಿ ಪುಟ್ಟಿ ನಿಮ್ಮ ಸ್ಕ್ರೀನ್ ಪ್ಲೇಯನ್ನು ನಾವು ತೆರೆಯ ಮೇಲೆ ನೋಡುತ್ತೇವೆ ಎಂದು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದನ್ನೂ ಓದಿ: ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್
View this post on Instagram
ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ 2018ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿ.2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಮಗು ಹುಟ್ಟಿದ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ಕ್ಲಿಕ್ಕಿಸಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದರು.