ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ: ಕನ್ನಡಕ್ಕೆ ಸಿಕ್ಕ ಮತ್ತೋರ್ವ ಆರಡಿ ಕಟೌಟ್

Public TV
2 Min Read
Samarjit Lankesh 4 1

ತ್ರಿಕೋದ್ಯಮದ ಖ್ಯಾತನಾಮರಾದ ಪಿ ಲಂಕೇಶ್ ಮೊಮ್ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಇಂದ್ರಜಿತ್ ಲಂಕೇಶ್ (Indrajit Lankesh) ಚಿತ್ರರಂಗದಲ್ಲಿ ಸ್ಟೈಲಿಶ್ ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವಂತಹ ಇಂದ್ರಜಿತ್ ಲಂಕೇಶ್ ಈ ಬಾರಿ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

Samarjit Lankesh 3 1

‘ಗೌರಿ’ (Gauri) ಹೆಸರಿನ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್ (Samarjit Lankesh) ಅವರನ್ನ ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯ ಮಾಡುತ್ತಿದ್ದು ಇಂದು ಬೆಂಗಳೂರಿನಲ್ಲಿ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನಡೆದಿದೆ. ಗೌರಿ ಸಿನಿಮಾಗಾಗಿ ಸಮರ್ಜಿತ್ ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು ಸಮರ್ಜಿತ್ ಜೊತೆಯಾಗಿ ಸಾನ್ಯ ಐಯ್ಯರ್ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

Samarjit Lankesh 2 1

ಸಿನಿಮಾ ಮುಹೂರ್ತಕ್ಕೂ ಮುನ್ನವೇ ಸಮರ್ಜಿತ್ ಹಾಗೂ ಸಾನಿಯಾ (Sanya Iyer) ಅವರ ಫೋಟೋಶೂಟ್ ನಡೆದಿದ್ದು ಸ್ಯಾಂಡಲ್ವುಡ್ ನ ಸ್ಟಾರ್ ಸಿನಿಮಾಟೋಗ್ರಾಫರ್ ಆದ ಭುವನ್ ಗೌಡ ಅವರು ಸಮರ್ಜಿತ್ ಅವರ  ಫೋಟೋಶೂಟ್ ಮಾಡಿ ಲುಕ್ ಟೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!

Samarjit Lankesh 1 1

ಭುವನ್ ಮಾತ್ರವಲ್ಲದೆ  ಎಜೆ ಶೆಟ್ಟಿ ಅವ್ರಿಂದಲೂ ಫೋಟೋ ಶೂಟ್ ಮಾಡಿಸಿದ್ದು ಸಾನ್ಯ ಹಾಗೂ ಸಮಜಿತ್ ಇಬ್ಬರ ಕೆಮಿಸ್ಟ್ರಿ ಫೋಟೋ ಶೂಟ್ ನಲ್ಲಿ ಸಖತ್ತಾಗಿ ವರ್ಕ್ ಆಗಿದೆ. ಈಗಾಗಲೇ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವಂತಹ ಇಂದ್ರಜಿತ್ ತಮ್ಮ ಮಗ ಯಾವ ಯಾವ ಪಾತ್ರದಲ್ಲಿ ಯಾವ ರೀತಿ ಕಾಣಿಸುತ್ತಾರೆ ಎಂಬುದನ್ನು ಚೆಕ್ ಮಾಡಲು ಸುಮಾರು ನಾಲ್ಕೈದು ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

 

ಬರೀ ಫೋಟೋ ಶೂಟ್ ಮಾತ್ರವಲ್ಲದೇ ಕೆಲ ಹಳೆ ಸಿನಿಮಾ ಸೀನ್ ಗಳನ್ನ ರೀ ಕ್ರಿಯೇಟ್ ಮಾಡುವ ಮೂಲಕ ಮಗನ ನಟನೆಯನ್ನೂ ಕೂಡ ಟೆಸ್ಟ್ ಮಾಡಿದ್ದಾರೆ. ಲುಕ್ ಹಾಗೂ ಆಕ್ಟಿಂಗ್, ಸ್ಟಂಟ್, ಡ್ಯಾನ್ಸ್ ಎಲ್ಲಾ ವಿಚಾರದಲ್ಲಿಯೂ ಸಮರ್ಜಿತ್ ಪರ್ಫೆಕ್ಟ್ ಅನ್ನಿಸುತ್ತಿದ್ದು ಮುಹೂರ್ತ ಮಾಡಿ ನೇರವಾಗಿ ಶೂಟಿಂಗ್ ಹೋಗಲಿದೆ ಗೌರಿ ಸಿನಿಮಾ ಟೀಂ.

Web Stories

Share This Article