‘ಆಲ್ಫಾ ಮೆನ್ ಲವ್ ವೈಲೆನ್ಸ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ಹೀರೋ ಹೇಮಂತ್ ಕಮಾರ್ (Hemanth Kumar)ಎಂಟ್ರಿಕೊಟ್ಟಿದ್ದಾರೆ. ಪಕ್ಕಾ ಮಾಸ್ ಸನಿಮಾ ಮೂಲಕ ಹೇಮಂತ್ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಇಂದು ಶಿವರಾತ್ರಿ ಪ್ರಯುಕ್ತ ಆಲ್ಫಾ ಮೆನ್ ಲವ್ ವೈಲೆನ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾತಂಡ. ‘ಆಲ್ಫಾ ಮೆನ್ ಲವ್ ವೈಲೆನ್ಸ್’ ಆಕ್ಷನ್ ಸಿನಿಮಾ ಜೊತೆಗೆ ಅಪ್ಪ ಮತ್ತು ಮಗನ ಸ್ಟ್ರಾಂಗ್ ಎಮೋಷನ್ ಕೂಡ ಹೈಲೆಟ್.
Advertisement
ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೊಸ ಹೀರೋನಾ ಪರಿಚಯ ಮಾಡುತ್ತಿದ್ದಾರೆ ನಿರ್ದೇಶಕ ವಿಜಯ್. ಈ ಮೊದಲು ಗೀತ ಮತ್ತು ಹೊಯ್ಸಳ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ನಿರ್ದೇಶಕ ವಿಜಯ್ (Vijay) ನಿರ್ದೇಶನದ 3ನೇ ಸಿನಿಮಾವಿದು.
Advertisement
Advertisement
ಸದ್ಯ ಸಿನಿಮಾದ ಮೊದಲ ಲುಕ್ ರಿಲೀಸ್ ಆಗಿದ್ದು ನಾಯಕ ಹೇಮಂತ್ ರಗಡ್ ಗೆಟಪ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಆಕ್ಷನ್ ಮತ್ತು ಕ್ರೈಮ್ ನ ನಭಯಾನಕಥೆ ಎಷ್ಟಿರುತ್ತೆ ಎನ್ನುವುದು ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಮೂರು ಪಾತ್ರಗಳು ಡೋಮಿನೇಟ್ ಮಾಡುವುದರಿಂದ ಸಿನಿಮಾಗೆ ಆಲ್ಫಾ ಎಂದು ಟೈಟಲ್ ಇಡಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿಜಯ್. ಆಲ್ಫಾ ಟೈಟಲ್ ಜೊತೆಗೆ ಮೆನ್ ಲವ್ ವೈಲನ್ಸ್ ಸಬ್ ಟೈಟಲ್ ಕೂಡ ಗಮನ ಸೆಳೆಯುತ್ತಿದೆ..
Advertisement
ಈ ಸಿನಿಮಾ ಮೂಲಕ ಆನಂದ್ ಕುಮಾರ್ (Anand Kumar) ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಎಲ್ ಎ’ ಬ್ಯಾನರ್ ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ. ಇನ್ನು ಹೀರೋ ಆಗಿ ಎಂಟ್ರಿ ಕೊಡುತ್ತಿರುವ ನಾಯಕ ಹೇಮಂತ್ ಕುಮಾರ್ ಈ ಸಿನಿಮಾಗಾಗಿ ಭರ್ಜರಿ ತಯಾರಿಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ಆಕ್ಟಿಂಗ್ ತಯಾರಿ ನಡೆಸಿದ್ದಾರೆ. ಅರ್ಜುನ್ ಅವರ ಜೊತೆ ಫೈಟ್ ಅಭ್ಯಾಸ ಮಾಡಿದ್ರೆ, ಭೂಷಣ್ ಅವರ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜೊತೆಗೆ ಮಾರ್ಶಲ್ ಆರ್ಟ್ ಕಲಿತಿದ್ದಾರೆ ನಾಯಕ ಹೇಮಂತ್.
ಈ ಸಿನಿಮಾದಲ್ಲಿ ಕಾರ್ತಿಕ್ ಅವರ ಡಿಒಪಿ, ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಾಸ್ತಿ ಅವರ ಡೈಲಾಗ್ ಇರಲಿದೆ. ಹೇಮಂತ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಉಳಿದಂತೆ ಪಾತ್ರವರ್ಗ ಏನೆಲ್ಲ ಇರಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.