ಆನೇಕಲ್: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯ ಜೀವಿಗಳನ್ನು ಕಂಡು ಸಂತಸಗೊಳ್ಳುತ್ತಾರೆ. ಇದೀಗ ಪಾರ್ಕ್‌ಗೆ ಮತ್ತೋರ್ವ ಹೊಸ ಅತಿಥಿ ಆಗಮನವಾಗಿದ್ದು, ಪ್ರಾಣಿ ಪ್ರಿಯರನ್ನು ಮತ್ತಷ್ಟು ಆಕರ್ಷಣೆಗೊಳಿಸುತ್ತಿದೆ.
ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಮುದ್ದಾದ ಕಣ್ಣಿನ ನೋಟದಿಂದ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿರುವ ಮರಿ ಜೀಬ್ರಾ (Zebra) ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹೊಸ ಅತಿಥಿ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ (Park) ಕಬಿನಿ ಎಂಬ ಜೀಬ್ರಾ ಮುದ್ದಾರಿ ಮರಿಗೆ ಜನ್ಮ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಕಬಿನಿ ಹಾಗೂ ಹರಿಶ್ಚಂದ್ರ ದಂಪತಿಗೆ ಮರಿ ಜನಿಸಿದೆ. ಸುಮಾರು ಮೂರರಿಂದ ನಾಲ್ಕು ವರ್ಷ ವಯಸ್ಸಿನ ತಾಯಿ ಕಬಿನಿ ಮೊದಲ ಬಾರಿಗೆ ಗರ್ಭಧರಿಸಿ ಮುದ್ದಾದ ಮರಿ ಜೀಬ್ರಾಗೆ ಜನ್ಮ ನೀಡಿದ್ದು, ಮರಿ ಜೀಬ್ರಾ ಸೇರ್ಪಡೆಯೊಂದಿಗೆ, ಮೃಗಾಲಯದಲ್ಲಿ ಒಟ್ಟು ಜೀಬ್ರಾಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ತಾಯಿ ಮತ್ತು ಮರಿ ಜೀಬ್ರಾ ಎರಡೂ ಆರೋಗ್ಯಕರವಾಗಿದ್ದು, ಪಾರ್ಕ್‌ನ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರು ಹೆಚ್ಚಿನ ಆರೈಕೆಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಪಾರ್ಕ್‌ನಲ್ಲಿ ತಾಯಿ ಜೀಬ್ರಾದೊಂದಿಗೆ ಮರಿ ಜೀಬ್ರಾವನ್ನು ಪ್ರವಾಸಿಗರು ಕಾಣಬಹುದಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 2ಕ್ಕೆ ‘ಆದಿತ್ಯ-ಎಲ್1’ ಉಡಾವಣೆ – ಏನಿದರ ವಿಶೇಷ?
Advertisement
Advertisement
ಕಬಿನಿ ಜೀಬ್ರಾಗೆ ಇದು ಮೊದಲನೇ ಮರಿಯಾಗಿದ್ದು, ತಾಯಿ-ಮಗು ಆರೋಗ್ಯಕರವಾಗಿದೆ. ತಾಯಿ ಹಾಗೂ ಮರಿ ಜೀಬ್ರಾವನ್ನು ವಿಶೇಷ ಕಾಳಜಿ ಇಟ್ಟು ನೋಡಿಕೊಳ್ಳಲಾಗುತ್ತಿದೆ. ಮರಿ ಜೀಬ್ರಾಗೆ ತಾಯಿ ಕಬಿನಿ ಹೆಚ್ಚಿನ ಹಾಲು ನೀಡಬೇಕಾಗಿರುವ ಹಿನ್ನೆಲೆ ಪೋಷಕಾಂಶಗಳ ಹಣ್ಣುಹಂಪಲನ್ನು ತಾಯಿ ಜೀಬ್ರಾಗೆ ನೀಡಲಾಗುತ್ತಿದೆ. ಆದಷ್ಟು ಬೇಗ ಮರಿ ಜೀಬ್ರಾವನ್ನು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಟ್ಟರೆ ಪಾರ್ಕ್‌ಗೆ ಬರುವ ಮಕ್ಕಳಿಗೆ ಮುದ್ದಾದ ಮರಿ ಜೀಬ್ರಾವನ್ನು ನೋಡಲು ಖುಷಿಯಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಪಾರ್ಕ್ ನಲ್ಲಿ ಮರಿ ಜೀಬ್ರಾ ಒಂದು ರೀತಿಯ ಸಂತಸದ ಜೊತೆಗೆ ಪ್ರಾಣಿ-ಪಕ್ಷಿ ಪ್ರಿಯರ ಆಕರ್ಷಣೀಯವಾಗಲಿದೆ ಎಂದು ಪ್ರವಾಸಿಗರು ಸಂತಸ ಹಂಚಿಕೊಂಡರು. ಇದನ್ನೂ ಓದಿ: ದೇಶದಲ್ಲೇ ಮೊದಲ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆಗೆ ಡಿಕೆಶಿ ಶಂಕುಸ್ಥಾಪನೆ
Advertisement
Advertisement
ಒಟ್ಟಾರೆ ವನ್ಯ ಜೀವಿಗಳ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ದಿನೇ ದಿನೇ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದೀಗ ಇದರ ಸೊಬಗನ್ನು ಮರಿ ಜೀಬ್ರಾ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಇದನ್ನೂ ಓದಿ: ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹದ: ಜೋಡೆತ್ತುಗಳಿಗೆ ಮೆಚ್ಚುಗೆ
Web Stories