ಚಿಕ್ಕಮಗಳೂರು: ದತ್ತ ಜಯಂತಿ ಹಾಗೂ ಈದ್-ಮಿಲಾದ್ ಒಂದೇ ದಿನ ಬಂದಿರೋದ್ರಿಂದ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಈಶ್ವರ್ ಅಲ್ಲಾ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್ ಎಂದು ಮಹಾತ್ಮ ಗಾಂಧಿಜೀ ಹಿಂದೂ ಹಾಗೂ ಮುಸ್ಲಿಂ ಯುವಕರನ್ನು ತಬ್ಬಿಕೊಂಡಿರೋ ಕಾರ್ಟೂನ್ ಸೇರಿದಂತೆ, ನೀವು ಪರಿಶೀಲಿಸದೆ ಫಾವರ್ಡ್ ಮಾಡೋ ಒಂದೊಂದು ಸಂದೇಶ ಕೂಡ ಮಾರಕಾಯುಧಗಳಷ್ಟೇ ಅಪಾಯಕಾರಿ ಹಾಗೂ ದೇಶ ಗೆಲ್ಲೋದಕ್ಕೆ ಮತೀಯ ಪಾರ್ಟ್ನ ರ್‍ಶಿಪ್ ಬೇಕು ಎಂಬ ಸಂದೇಶಗಳುಳ್ಳ ಬೋರ್ಡ್ ಮಾಡಿಸಿ ಚಿಕ್ಕಮಗಳೂರು ನಗರದ ಪ್ರಮುಖ ಭಾಗಗಳಲ್ಲಿ ಹಾಕಲಾಗಿದೆ.
Advertisement
ದತ್ತ ಜಯಂತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಅತೀ ಸೂಕ್ಷ್ಮವಾಗಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿಲಾಗಿದೆ. 4 ಸಾವಿರ ಪೊಲೀಸರ ಸರ್ಪಗಾವಲಿದ್ದರೂ ಪೊಲೀಸ್ ಇಲಾಖೆ ಈ ರೀತಿಯ ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಿ ದತ್ತ ಜಯಂತಿ ಹಾಗೂ ಈದ್- ಮಿಲಾದ್ ಕಾರ್ಯಕ್ರಮವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿದೆ.