ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಪ್ರೀತಿ ಹುಟ್ಟಬಹುದು. ಇದಕ್ಕೆ ನೆದರ್ಲೆಂಡ್ (Netherland) ಯುವತಿ ಮಂಗಳೂರಿನ (Mangaluru) ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ.
ಯುವಕ ಮೂಲತಃ ಮಂಗಳೂರಿನವನಾಗಿದ್ದು ನೆದರ್ಲೆಂಡ್ನಲ್ಲಿ (Netherland) ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರೀತಿಯಾಗಿದ್ದು (Love), ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ (Marriage). ನೆದರ್ಲೆಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಇಲ್ಲಿನ ಸುರತ್ಕಲ್ ನಲ್ಲಿ (Surathkal) ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವತಿ ಕುಟುಂಬಸ್ಥರೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದ ವೀಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ.
ಮದುವೆ ಬಳಿಕ ಭಾಷೆ ತಿಳಿಯದ ಹುಡುಗನ ಹಿರಿಯಜ್ಜಿ ವಿದೇಶಿಗರ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ, ಈ ತಮಾಷೆಯ ವೀಡಿಯೋ ತುಣುಕು ನೆಟ್ಟಿಗರಲ್ಲಿ ಹಾಸ್ಯ ತರಿಸಿದೆ. ಇದನ್ನೂ ಓದಿ: ಆಟೋರಾಜನ ಕೈಹಿಡಿದ ಬೆಲ್ಜಿಯಂ ಕನ್ಯೆ – ಹಿಂದೂ ಸಂಪ್ರದಾಯದಂತೆ ಅದ್ದೂರಿ ಮದುವೆ
ಕಳೆದ ವರ್ಷ ಬೆಲ್ಜಿಯಂ ಕನ್ಯೆಯೊಬ್ಬಳು, ಹಂಪಿಯ ಆಟೋಚಾಲಕ ಯುವಕನನ್ನ ಪ್ರೀತಿಸಿ ಮದುವೆ ಆಗಿದ್ದರು. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದನ್ನೂ ಓದಿ: ಪುತ್ತೂರು ಕಂಬಳದಲ್ಲಿ ಕಿರಿಕ್ – ಸಮಸ್ಯೆ ಪರಿಹಾರಕ್ಕೆ ದೇವರ ಮೊರೆಹೋದ ಕಂಬಳ ಸಮಿತಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k