ಖ್ಯಾತ ಪಾಪ್ ಗಾಯಕಿ ರಿಹನ್ನಾ (Rihanna) ಭೇಟಿ ಮಾಡಿ, ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ ನಾಟು ನಾಟು ಗೀತೆಯ ಗಾಯಕ ಕಾಲಭೈರವ. ಆ ಕ್ಷಣವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆಸ್ಕರ್ (Oscar) ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ‘ನಾಟು ನಾಟು’ (Natu Natu) ಗೀತೆಯನ್ನು ಹಾಡಲು ಅಮೆರಿಕಾಗೆ ಹೋಗಿದ್ದರು ಕಾಲಭೈರವ (Kalabhairava). ಈ ಕಾರ್ಯಕ್ರಮದಲ್ಲಿ ರಿಹನ್ನಾ ಕೂಡ ಭಾಗಿಯಾಗಿದ್ದರು.
ರಿಹನ್ನಾ ಇದೀಗ ತುಂಬು ಗರ್ಭಿಣಿ. ಆದರೂ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದಾರೆ. ಈಗಾಗಲೇ ಗಾಯನಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇಂತಹ ಗಾಯಕಿಯ ಜೊತೆ ನಾನು ಫೋಟೋ ತೆಗೆಸಿಕೊಂಡಿದ್ದು ಎಂದೂ ಮರೆಯದ ಸನ್ನಿವೇಶ ಎಂದು ಕಾಲಭೈರವ ಬರೆದುಕೊಂಡಿದ್ದಾರೆ ಮತ್ತು ಅವರ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?
ರಿಹನ್ನಾ ಹಾಲಿವುಡ್ ಕಂಡ ಅತ್ಯಂತ ಪ್ರತಿಭಾನ್ವಿತ ಗಾಯಕಿ. ಸ್ಟೇ ಸೇರಿದಂತೆ ಸಾವಿರಾರು ಹಾಡುಗಳನ್ನು ಅವರು ಹಾಡಿದ್ದಾರೆ. ಜಗತ್ತಿನ ಹೆಸರಾಂತ ಗಾಯಕಿಯರ ಪಟ್ಟಿಯಲ್ಲಿ ಅವರ ಹೆಸರು ಕೂಡ ಇದೆ. ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಆ ಅಭಿಮಾನಿಗಳಲ್ಲಿ ಕಾಲಭೈರವ ಕೂಡ ಒಬ್ಬರಂತೆ. ಅವರ ಅನೇಕ ಹಾಡುಗಳನ್ನು ಕಾಲಭೈರವ ಕೇಳಿದ್ದಾರಂತೆ.