ಬೆಂಗಳೂರು: ಕೂಡಲೇ ಒಳಮೀಸಲಾತಿ ಜಾರಿ ಮಾಡದೆ ಇದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾದಿಗರಿಂದ ಅಸಹಕಾರ ಚಳವಳಿ ನಡೆಸಲಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ (A Narayanaswamy) ಎಚ್ಚರಿಕೆ ನೀಡಿದ್ದಾರೆ.
ಒಳಮೀಸಲಾತಿ (Internal Reservation) ಜಾರಿ ಮಾಡಲು ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಬೆಂಗಳೂರು ಒಕ್ಕೂಟದ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಶುಕ್ರವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಮಾದಿಗರು ಇನ್ನು ಕಾಯುವುದಿಲ್ಲ. ಓಲೈಕೆಗೆ ಬಗ್ಗುವುದಿಲ್ಲ. ಮುಂದಿನ ಚುನಾವಣೆವರೆಗೆ ಕಾಯುವುದಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಹೋರಾಟ ನಡೆಯುತ್ತಿದೆ. ಪಕ್ಷಭೇದ ಮರೆತು ಹೋರಾಟ ನಡೆಯುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬಿಹಾರ ಕರಡು ಮತದಾರರ ಪಟ್ಟಿ ಔಟ್
ಇದು ಬಿಜೆಪಿಯ ಹೋರಾಟವಲ್ಲ. ಕರ್ನಾಟಕ ಸರ್ಕಾರಕ್ಕೆ ಕುರ್ಚಿ ಪ್ರಮುಖವೇ ಅಥವಾ ಸಮಸ್ಯೆಗಳು ಮುಖ್ಯವೇ? ಮಾದಿಗರಿಗೆ ನ್ಯಾಯ ಲಭಿಸಿಲ್ಲ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ಇನ್ನು ಕಾಯಲಾಗದು. ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್| ಬೆಂಗಳೂರಿನ ಎಫ್‌ಎಸ್‌ಎಲ್‌ಗೆ 25 ಮೂಳೆ ರವಾನೆ
1976ರಿಂದ ಮಾದಿಗರಿಗೆ ಆದ ಅನ್ಯಾಯದ ವರದಿ ಕೊಡಿ ಎಂದರೆ ಮುಖ್ಯ ಕಾರ್ಯದರ್ಶಿ ಸಭೆ ಮಾಡುವುದಿಲ್ಲ. ಕೇವಲ ಜನಸಂಖ್ಯೆ ಆಧರಿಸಿ ಮೀಸಲಾತಿ ಕೊಡುವುದಲ್ಲ. ಸುಮಾರು 40 ವರ್ಷಗಳಿಂದ ಆದ ಅನ್ಯಾಯವನ್ನು ಪರಿಗಣಿಸಿ ಮೀಸಲಾತಿ ಕೊಡಬೇಕಿದೆ. ಅನೇಕ ದಶಕಗಳಿಂದ ಆದ ಅನ್ಯಾಯ ಪರಿಗಣಿಸಿ ಹೆಚ್ಚು ಮೀಸಲಾತಿ ಕೊಡದೆ ಇದ್ದರೆ ರಾಜ್ಯದ ಮಾದಿಗರು ಹೋರಾಟಕ್ಕೆ ಸನ್ನದ್ಧರಾಗುತ್ತಾರೆ ಎಂದಿದ್ದಾರೆ.
ವಿಧಾನಸೌಧದ ಮೆಟ್ಟಿಲೇರಿದವರಿಗೆ ನಾಲಿಗೆ ಬಿದ್ದು ಹೋಗಿದೆ. ಮಾದಿಗರ ಪರವಾಗಿ ಮಾತನಾಡದ ನೀವು ಯಾವ ಯೋಗ್ಯತೆ ಇಟ್ಟುಕೊಂಡು ಮತ ಕೇಳುತ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕ್ ಬೆಂಬಲಿಸಿದ ಟರ್ಕಿಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ
ಈ ದೇಶದ ಮಾದಿಗರಿಗೆ ಮೀಸಲಾತಿ ಕೊಡಬಾರದು ಎಂದಿದೆಯೇ? ಜಿಲ್ಲಾ ಪಂಚಾಯಿತಿ ಮತ್ತಿತರ ಸಂಸ್ಥೆಗಳ ಚುನಾವಣೆ ವೇಳೆ ನಾಳೆ, ನಾಳೆ ಮೀಸಲಾತಿ ಎನ್ನುತ್ತಾರೆ. ಸಂವಿಧಾನಕ್ಕೆ ಬೀಗ ಹಾಕಿ ತುರ್ತು ಪರಿಸ್ಥಿತಿ ಘೋಷಿಸಿ ಪ್ರಧಾನಿಯಾಗಿ ಮುಂದುವರೆಯಲು ನಿಮಗೆ ಅಧಿಕಾರ ಇತ್ತು. ಈ ರಾಜ್ಯದ, ದೇಶದ ಶೋಷಿತ ವರ್ಗದ ಅಸ್ಪೃಶ್ಯ ಮಾದಿಗರಿಗೆ ಸ್ವಾತಂತ್ರ್ಯ ನಂತರ ನಿರಂತರ ಅನ್ಯಾಯವಾಗಿದೆ. ಅನೇಕ ಮಾದಿಗರ ಮಕ್ಕಳು ಹಣವಿಲ್ಲದೇ ಎಂಬಿಬಿಎಸ್ ಮಾಡಲಾಗುತ್ತಿಲ್ಲ. ಇದೆಲ್ಲ ನಿಮಗೆ ಅರ್ಥವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ತಕರಾರಿನ ಹಿಂದೆ ಬರೀ ರಾಜಕೀಯ ದುರುದ್ದೇಶ: ಎಂ.ಬಿ ಪಾಟೀಲ್
ಮಾದಿಗರು ಎಲ್ಲ ಕಡೆ ಹಿಂದುಳಿದಿದ್ದಾರೆ. ಮುಖ್ಯಮಂತ್ರಿಗಳ ಸಮಾಜವಾದ ಎಲ್ಲಿ ಹೋಗಿದೆ? ಎಲ್ಲರಿಗೂ ನ್ಯಾಯ ಕೊಡುವುದಾಗಿ ಹೇಳುವ ಸಮಾಜವಾದಿ ಮುಖ್ಯಮಂತ್ರಿ ಯಾವುದರ ಚಾಂಪಿಯನ್. ಎಲ್ಲ ರಂಗಗಳಲ್ಲೂ ಹಿಂದುಳಿದ ಮಾದಿಗರಿಗೆ ಒಂದೇ ಒಂದು ಯೋಜನೆ ನೀಡಿಲ್ಲ. ಅಸಹಕಾರ ಚಳವಳಿ ಒಂದೇ ಅಲ್ಲ. ಸರ್ಕಾರವನ್ನು ಕಿತ್ತೊಗೆಯುವ ಚಳವಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ, ಪರಮೇಶ್ವರ್ ವಿರುದ್ಧವೂ ಕಿಡಿಕಾರಿದ ಅವರು, ಈ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಮಾಡದೇ ಹೋದ್ರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.