ChamarajanagarDistrictsKarnatakaLatestMain Post

ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುವುದೇ ಮಂಗಳೂರಿನಲ್ಲಿ: ಎ. ನಾರಾಯಣಸ್ವಾಮಿ

ಚಾಮರಾಜನಗರ: ಮಂಗಳೂರಿನಲ್ಲಿ ಹಲವು ಸಂಘಟನೆಗಳಿದ್ದು, ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುವುದೇ ಅಲ್ಲಿ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ಸಂಘಟನೆ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮಂಗಳೂರು, ಕೇರಳ, ದೆಹಲಿ ಸೇರಿದಂತೆ ಎಲ್ಲೇ ಸಂಘಟನೆಗಳು ಹುಟ್ಟಿಕೊಳ್ಳಲಿ, ಅವರನ್ನು ಸದೆಬಡಿಯುತ್ತೇವೆ. ಯಾವುದೇ ಕಾರಣಕ್ಕೂ ಅವರನ್ನು ಬಿಡಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಗೌರವ, ಸಾರ್ವಭೌಮತೆಗೆ ಕುಂದು ತರುವ ಸಂಸ್ಥೆಗಳನ್ನು ಬಿಡುತ್ತಿಲ್ಲ. ಯಾವುದನ್ನು ಯಾವ ಕಾಲಘಟ್ಟದಲ್ಲಿ ಬ್ಯಾನ್ ಮಾಡಬೇಕೋ, ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಏನೇ ಮಾಡಿದ್ರು ಅಂಜುವ ಮಗ ನಾನಲ್ಲ: ಯತ್ನಾಳ್

ಪಾಕಿಸ್ತಾನ್ ಜಿಂದಾಬಾದ್, ಛೋಟಾ ಪಾಕಿಸ್ತಾನ್ ಎಂದು ಕೂಗುವ ಪ್ರವೃತ್ತಿಗಳು ಜಮ್ಮು ಕಾಶ್ಮೀರದಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರಗಳು ಇದನ್ನು ನಿಗ್ರಹಿಸಲು ವಿಫಲವಾಗಿದ್ದವು. ಪಾಕಿಸ್ತಾನದಲ್ಲಿ ಸರ್ಕಾರ ಬದಲಾವಣೆಯಾದಾಗ ಇಂತಹ ಘಟನೆಗಳು ಮತ್ತೆ ಪ್ರಾರಂಭವಾಗಿವೆ. ಇದನ್ನು ನಿಗ್ರಹಿಸುವ ಶಕ್ತಿ ಭಾರತಕ್ಕಿದ್ದು, ನಿಗ್ರಹ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ: ಸಂದೀಪ್

ಪಾಕಿಸ್ತಾನದ ಏಜೆಂಟ್‌ನಂತೆ ನಡೆದುಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ, ಕೇಂದ್ರ ಸರ್ಕಾರ ಶಕ್ತವಾಗಿದೆ. ಧರ್ಮ ಸಂಘರ್ಷ ಪ್ರಕರಣಗಳು ನಡೆದಾಗ ನಿರ್ಲಕ್ಷ್ಯ ಮಾಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗುವುದು. ಕವಲಂದೆ ಪ್ರಕರಣದಲ್ಲೂ ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.

ಪಾಕಿಸ್ತಾನ ಏಜೆಂಟ್‌ಗಳು ದೇಶದಲ್ಲಿ ಸಕ್ರಿಯವಾಗಿದ್ದಾರೆ. ಅದಕ್ಕಾಗಿಯೇ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದೇವೆ. ದೇಶದಲ್ಲಿ ರಾಷ್ಟ್ರೀಯತೆ ಮೈಗೂಡಿಸಲು ಏನೇನು ಕಾನೂನು ಬೇಕು ಅದನ್ನು ತರಲಾಗುತ್ತಿದೆ ಎಂದರು.

Leave a Reply

Your email address will not be published.

Back to top button