ಚಿತ್ರದುರ್ಗ: ಕಾಂಗ್ರೆಸ್ ಕುರ್ಚಿಗಾಗಿ ರಾಜಕಾರಣ ಮಾಡೋದು ಜಗಜ್ಜಾಹಿರು ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ವಿರೋಧ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ವಿವೇಚನೆ ಇಲ್ಲದೇ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಗೆ ವಿವೇಚನೆ ಇಲ್ಲ, ಅನ್ನೊದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿವೆ. ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ.15 ರಿಂದ 17000 ಕೇಸ್ ಬರ್ತಿವೆ. ಈ ವೇಳೆ ಕಾಂಗ್ರೆಸ್ ನಾಯಕರು ದಂಡು ಕಟ್ಕೊಂಡು ಬೆಂಗಳೂರಿಗೆ ಬರ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ರಾಜ್ಯದ ಹಿತಕ್ಕಿಂತ ಕೈ ನಾಯಕರಿಗೆ ರಾಜಕಾರಣವೇ ಮುಖ್ಯವಾಗಿದೆ. ಅವರು ಉದ್ದೇಶ ಗಮನಿಸಿದಾಗ ಅಧಿಕಾರ ಹಾಗೂ ಕುರ್ಚಿ ಮುಖ್ಯ ಅಂತ ತೋರುತ್ತಿದೆ. ಜನರ ಆರೋಗ್ಯ ಹಾಗೂ ರಾಜ್ಯ, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಾಂಗ್ರೆಸ್‌ಗೆ ಕಮಿಟ್ಮೆಂಟ್ ಇಲ್ಲ. ಕೇವಲ ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಎಲ್ಲಾ ರಾಜಕಾರಣ ಮಾಡುತ್ತಿದ್ದಾರೆ, ಅನ್ನೋದು ಜಗಜ್ಜಾಹಿರಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಕೈ ನಾಯಕರು ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಪ್ರತಿಭಟಿಸಲು ಅನೇಕ ದಾರಿಗಳು, ಸಮಯವಿದೆ. ಕೊರೊನಾ ನಿಯಂತ್ರಣ ಬಂದ ಬಳಿಕ ಮಾಡುವ ಪ್ರತಿಭಟನೆಗಳನ್ನ ಬಿಜೆಪಿ ಸರ್ಕಾರ ಕೂಡ ಸ್ವಾಗತಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿಗೆ ಪತ್ರ ಬರೆದ ನೈಜ ಹೋರಾಟಗಾರರ ವೇದಿಕೆ
ಡಿ.ಕೆ.ಸುರೇಶ್ ‘ಗಂಡಸ್ತನ’ ಕುರಿತ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕಾಂಗ್ರೆಸ್ ನವರಿಗೆ ಈ ಬಗ್ಗೆ ಮರುಪ್ರಶ್ನೆ ಮಾಡಬೇಕಾಗುತ್ತದೆ. ರಾಜ್ಯ, ದೇಶದಲ್ಲಿ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದೆ. ಆಗ ನಿಮ್ಮ ಆಡಳಿತದಲ್ಲಿ ನೀವೇನು ಮಾಡಿದ್ದೀರಿ ಅಂತ ಜನ ಗಮನಿಸಿದ್ದಾರೆ. ಅಲ್ಲದೇ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ದಾಗ ಏಕೆ ಅನಮತಿ ಪಡೆಯಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಸರ್ಕಾರ ಕೇಸು ಹಾಕಿ ಕೈತೊಳೆದು ಕೊಂಡರೆ ಕೋರ್ಟ್ ಸುಮ್ಮನಿರಲ್ಲ. ಈಗಾಗಲೇ ಕೇಸ್ ಹಾಕಿದ್ದು ಕಾನೂನು ಕ್ರಮ ಸಹ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ
ಹಿರಿಯ ಸಚಿವ ಗೋವಿಂದ ಕಾರಜೋಳ ನಾಲಾಯಕ್ ಎಂದಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕೆಂಡಮಂಡಲವಾದ ಸಚಿವ ನಾರಾಯಣ ಸ್ವಾಮಿ ಅವರು, ನಾಲಾಯಕ್ ಯಾರಾಗಿದ್ದರು, ಯಾಕೆ ಅವರನ್ನು ಮಂತ್ರಿ ಮಾಡದೆ ಕೈಬಿಟ್ಟರು ಅನ್ನೋ ಬಗ್ಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅರ್ಥ ಮಾಡಿಕೊಳ್ಳಲಿ.ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಹೋಗಿದ್ದಾಗ ಅವರ ಪಕ್ಷವೇ ಅವರನ್ನು ಕೈಬಿಟ್ಟಿದೆ. ಇಂತಹ ವೇಳೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ವಯಸ್ಸಿಗೆ ತಕ್ಕಂತೆ ಮಾತಾಡಬೇಕು ಎಂದು ಕಿಡಿಕಾರಿದರು.
ಈಗ ನಿಮ್ಮ ಬಳಿ ದುಡ್ಡಿರಬಹುದು, ದುರಹಂಕಾರ ಇರಬಹುದು ಆದರೆ, ಕಾರಜೋಳ ಬಗ್ಗೆ ಹೀಯಾಳಿಸಿ ಮಾತಾಡಿದರೆ ನಮ್ಮ ಘನತೆಗೆ ಧಕ್ಕೆಯಾಗಲಿದೆ ಎಚ್ವರವಾಗಿ ಮಾತನಾಡಬೇಕಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ತಿರುಗೇಟುನೀಡಿದರು.