ಬೆಂಗಳೂರು: ಮುಸ್ಲಿಂ ಯುವತಿ (Muslim Girl) ತನ್ನ ಗೆಳೆಯನ ಜೊತೆ ಬೈಕ್ ಮೇಲೆ ಕುಳಿತಿದ್ದಕ್ಕೆ ಪುಂಡರ ಗ್ಯಾಂಗ್‌ವೊಂದು ಕಿರಿಕ್ ಮಾಡಿ, ಯುವಕನ ಮೇಲೂ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಕಾಲೇಜು ಯುವತಿ (College Girl) ಬೈಕ್ ಮೇಲೆ ತನ್ನ ಗೆಳೆಯನ ಬಳಿ ಕುಳಿತಿದ್ದಳು. ಈ ವೇಳೆ ಅಲ್ಲಿಗೆ ಬಂದ ಪುಂಡರ ಗ್ಯಾಂಗ್ ಕಿರಿಕ್ ಮಾಡಿದೆ. ಕಾಲೇಜಿಗೆ ಹೋಗೋದು ಬಿಟ್ಟು ಇಲ್ಲಿ ಕೂತಿದ್ಯಾ..? ನಿಮ್ಮ ಅಪ್ಪ ಅಮ್ಮನ ನಂಬರ್ ಕೊಡು.. ಮುಸ್ಲಿಂ ಆಗಿ ಈ ರೀತಿ ಮಾಡ್ತಿದ್ಯಾ..? ಇದೇನಾ ನಿಮ್ಮ ಮನೆಯಲ್ಲಿ ಹೇಳಿಕೊಟ್ಟಿದ್ದು ಅಂತ ಪುಂಡರು ಕಿರಿಕ್ ಮಾಡಿದ್ದಾರೆ.
ಅಲ್ಲದೇ ಆ ಯುತಿಯ ಗೆಳೆಯನಿಗೂ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ʻನಮ್ಮ ಮೋದಿʼ ಎನ್ನುವ ಪೇಜ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದು ನೈತಿಕ ಪೊಲೀಸ್ ಗಿರಿ ಅಲ್ವಾ ಸಿಎಂ ಸಿದ್ದರಾಮಯ್ಯನವರೇ? ರಾಜ್ಯದಲ್ಲಿ ಷರಿಯಾ ಕಾನೂನಿ ಜಾರಿ ಮಾಡಲಾಗಿದೆಯೇ? ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಸದ್ಯ ಪೊಲೀಸರು ವಿಡಿಯೋ ಮೂಲದ ಬೆನ್ನುಹತ್ತಿದ್ದು, ಕಿರಿಕ್ ಮಾಡಿದ ಪುಂಡರಿಗಾಗಿ ಶೋಧ ನಡೆಸಿದ್ದಾರೆ.