ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ (Girls) ಬಾವಿಗೆ ಹಾರಿದ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ಮಗಳು ಶ್ರೀನಿಧಿ (5) ಹಾಗೂ ತಾಯಿ ನಾಗಮ್ಮ (38) ಮೃತಪಟ್ಟಿದ್ದಾರೆ. 7 ವರ್ಷದ ಮಗಳು ಗಂಗೋತ್ರಿ ಬಾವಿಯಿಂದ ಈಜಿ ದಡ ಸೇರಿ ಬದುಕುಳಿದಿದ್ದಾಳೆ.
ಕೌಟುಂಬಿಕ ಕಲಹದಿಂದ ಬೇಸತ್ತು ನಾಗಮ್ಮ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂತೆಯೇ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ತೆರಳಿದ್ದು, ಅಲ್ಲಿನ ಬಾವಿಗೆ ಹಾರಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ- ರಸ್ತೆಗಳು ಜಲಮಯ, ಸಂಚಾರ ಅಯೋಮಯ
ಮೃತದೇಹಗಳಿಗಾಗಿ ಆಗ್ನಿಶಾಮಕದಳದಿಂದ ಶೋಧಕಾರ್ಯ ನಡೆಯುತ್ತಿದ್ದು, ಈ ಪ್ರಕರಣ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]