ಹಾಸನ: ಕಾಣೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಕೋರಿ ತಾಯಿಯೊಬ್ಬರು ಜಿಲ್ಲಾಧಿಕಾರಿ ಮುಂದೆ ಕಣ್ಣೀರು ಹಾಕಿದ ಘಟನೆ ಹಾಸನದಲ್ಲಿ ನಡೆದಿದೆ.
Advertisement
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಗ್ರಾಮವೊಂದರ ಸೋಮಶೇಖರ್-ಪುಷ್ಪಾ ದಂಪತಿಯ ಪುತ್ರಿ ಒಂದೂವರೆ ತಿಂಗಳ ಹಿಂದೆ ಕಾಣಿಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಇವರ ಮಗಳು ಕಾಣೆಯಾಗಿರುವ ಬಗ್ಗೆ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ತಮ್ಮ ಮಗಳನ್ನು, ಚನ್ನರಾಯಪಟ್ಟಣದ ಪವನ್‍ಶೆಟ್ಟಿ ಕಿಡ್ನಾಪ್ ಮಾಡಿದ್ದಾನೆ ಎಂದು ದಂಪತಿ ಆರೋಪ ಮಾಡುತ್ತಿದ್ದಾರೆ. ಆದರೆ ದೂರು ನೀಡಿ ಒಂದೂವರೆ ತಿಂಗಳು ಕಳೆದರು ಪೊಲೀಸರು ಮಗಳನ್ನು ಹುಡುಕಿಕೊಟ್ಟಿಲ್ಲ ಎಂದು ತಾಯಿ ಪುಷ್ಪಾ ಜಿಲ್ಲಾಧಿಕಾರಿ ಆರ್.ಗಿರೀಶ್ ಭೇಟಿ ಮಾಡಿ ಕಣ್ಣೀರು ಹಾಕಿದ್ದಾರೆ.
Advertisement
Advertisement
ತಾಯಿ ಪುಷ್ಪಾ ಡಿಸಿ ಭೇಟಿ ಮಾಡಿದ ವೇಳೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಹಾಗೂ ಮಾಜಿ ಶಾಸಕ ಪುಟ್ಟೇಗೌಡರು ಕೂಡ ಅಲ್ಲಿಯೇ ಇದ್ದರು. ಈ ವೇಳೆ ಪುಷ್ಪಾ ಇಬ್ಬರಿಗೂ ತಮ್ಮ ಮಗಳನ್ನು ಹುಡುಕಿಕೊಡಲು ಪೊಲೀಸರಿಗೆ ಸೂಚಿಸಲು ಮನವಿ ಮಾಡಿದ್ದಾರೆ. ಇಬ್ಬರೂ ಕೂಡ ಪೊಲೀಸರ ಜೊತೆ ಮಾತನಾಡಿ ಕಾಣೆಯಾದ ಮಗಳನ್ನು ಹುಡುಕಿಕೊಡಲು ಸೂಚಿಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸರೊಬ್ಬರು, ಮಗಳಿಗಾಗಿ ಹುಡುಕುತ್ತಿರುವ ತಾಯಿ ಪುಷ್ಪಾ ಬ್ಯಾಗಿನಲ್ಲಿ ವಿಷದ ಬಾಟಲ್ ಬಗ್ಗೆ ಬಾಲಕೃಷ್ಣ ಅವರಿಗೆ ತಿಳಿಸಿದ್ದಾರೆ. ತಕ್ಷಣ ವಿಷದ ಬಾಟಲ್ ಕಿತ್ತುಕೊಂಡ ಶಾಸಕರು, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸೂಚಿಸಿದ್ದಾರೆ.
Advertisement
ಕಾಲೇಜಿಗೆ ಹೋಗುತ್ತಿದ್ದ ಮಗಳು ಕಾಣೆಯಾಗಿರುವುದರಿಂದ ನೊಂದ ತಂದೆ, ತಾಯಿ ನ್ಯಾಯಕ್ಕಾಗಿ ಡಿಸಿ ಕಚೇರಿ ಮೆಟ್ಟಿಲೇರುವಂತಾಗಿದೆ. ಇನ್ನಾದರೂ ಚನ್ನರಾಯಪಟ್ಟಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕಿಯನ್ನು ಪತ್ತೆಹಚ್ಚಬೇಕಾಗಿದೆ. ಇದರಿಂದ ಮುಂದಾಗುವ ಅನಾಹುತ ತಪ್ಪಿಸಬೇಕಿದೆ. ಇದನ್ನೂ ಓದಿ: ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ: ಸಂದೀಪ್ ಪಾಟೀಲ್