ಮಂಡ್ಯ: ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ತಾಯಿ ಹಸುವೊಂದು ಪತ್ತೆ ಹಚ್ಚಿದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
Advertisement
ಈ ಘಟನೆ ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಮನಕಲಕುವ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ತಡರಾತ್ರಿ ಚಿರತೆ ಹೊತ್ತೊಯ್ದಿದೆ. ಹೀಗಾಗಿ ಕರುವನ್ನು ಮಾಲೀಕ ಕೊನ್ನಾಪುರ ಚಂದ್ರಶೇಖರ್ ಹುಡುಕಾಡುತ್ತಿದ್ದರು. ಇದನ್ನೂ ಓದಿ: ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ
Advertisement
Advertisement
ಕರು ಎಲ್ಲೂ ಸಿಗದಿದ್ದಾಗ ಚಂದ್ರಶೇಖರ್ ಅವರು ತಾಯಿ ಹಸುವಿನ ಹಗ್ಗ ಬಿಚ್ಚಿ ಬಿಟ್ಟಿದ್ದರು. ಅಂತೆಯೇ ತಾಯಿ ಹಸು ತನ್ನ ಕರುವಿಗಾಗಿ ಹುಡುಕುತ್ತಾ ಸಾಗಿತ್ತು. ಕೊಟ್ಟಿಗೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿದ್ದ ಗದ್ದೆ ಬಯಲಿನಲ್ಲಿ ಕರುವನ್ನು ಹಸು ಪತ್ತೆ ಹಚ್ಚಿದೆ.
Advertisement
ಚಿರತೆ ದಾಳಿಯಿಂದ ಕರು ಪ್ರಾಣಬಿಟ್ಟಿತ್ತು. ಒಟ್ಟಿನಲ್ಲಿ ತನ್ನ ಕರುವಿನ ಮೃತದೇಹ ಪತ್ತೆ ಹಚ್ಚುವ ಮೂಲಕ ತಾಯಿ ಎಲ್ಲರ ಗಮನಸೆಳೆಯುವಂತೆ ಮಾಡಿದೆ.