ಶ್ರೀಗಳಿಗೆ ನಾಲ್ಕು ವರ್ಷವಿರುವಾಗಲೇ ಅವರ ಮನೆಗೆ ಹಸ್ತ ಸಾಮುದ್ರಿಕ ಸನ್ಯಾಸಿಯೊಬ್ಬರು ಆಗಮಿಸಿದ್ದರಂತೆ. ಇವರ ಮನೆಯ ಕಟ್ಟೆಯಲ್ಲಿ ಕೂತಿದ್ದ ಸನ್ಯಾಸಿಗೆ ಶಿವಣ್ಣದ ಬಾಲ್ಯದ ತೇಜೋ ವಿಶೇಷತೆಯನ್ನು ಕಂಡು ಸಂತೋಷಗೊಂಡಿದ್ದರು.
ಬಳಿಕ ಶಿವಣ್ಣನ ಕೈಯನ್ನು ನೋಡಿ, “ಸ್ವಾಮಿ ಇಷ್ಟೊಂದು ಶುಭಲಕ್ಷಣದ ಕೈಯನ್ನು ನಾನು ನೋಡೇ ಇಲ್ಲ”, ಇವನೊಬ್ಬ ಮಹಾಭಾಗ್ಯವಂತ, ಅನ್ನದಾನಿ, ನಾಡೆಲ್ಲ ಇವರಿಂದಲೇ ಬೆಳಗುವುದು, ಇವರು ಕಾಲಜ್ಞಾನಿ. ನಿಮ್ಮ ಕೈಗೆ ಸಿಗುವವನಲ್ಲ, ಲೋಕದ ಸ್ವತ್ತು” ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!
Advertisement
Advertisement
ಸನ್ಯಾಸಿಯ ಭವಿಷ್ಯವನ್ನು ಮನೆ ಅವರು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ಬಾಲಕ ಶಿವಯೋಗಿಯಾಗಿ ಬದಲಾಗುತ್ತಾ ಕೊನೆಗೆ ಶಿವಕುಮಾರ ಸ್ವಾಮೀಜಿಯಾಗಿ ಸಿದ್ದಗಂಗಾ ಮಠದ ಅಧಿಕಾರ ಸ್ವೀಕರಿಸಿ ನಡೆದಾಡುವ ದೇವರಾಗಿದ್ದು ಇತಿಹಾಸ.
Advertisement
ಕುದುರೆ ಸವಾರಿ: ಕುದುರೆ ಸವಾರಿಯನ್ನು ಅತ್ಯಂತ ಪ್ರೀತಿಸುತ್ತಿದ್ದ ಸಿದ್ದಗಂಗಾ ಶ್ರೀ ಅವರ ಬಾಲ್ಯದ ಬದುಕು ಎಲ್ಲರಂತೆ ತುಂಟಾಟದಿಂದಲೇ ಕೂಡಿತ್ತು. ತಂದೆ ಇಲ್ಲದ ವೇಳೆಯಂತೂ ಕುದುರೆಯನ್ನು ಬಿಚ್ಚಿಕೊಂಡು ಹೋಗಿ ಧೂಳೆಬ್ಬಿಸುವಂತೆ ಕುದುರೆ ಸವಾರಿ ಮಾಡುತ್ತಿದ್ದರಂತೆ. ಸಿದ್ದಗಂಗಾ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಶಿವಕುಮಾರ ಸ್ವಾಮೀಜಿಗಳು ಭಕ್ತರ ಮನೆಗೆ ಕುದುರೆ ಮೂಲಕ ಸಂಚರಿಸಿ ಭೇಟಿ ನೀಡುತ್ತಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ
Advertisement
ಹಲಸಿನ ಹಣ್ಣನ್ನು ಇಷ್ಟಪಡುತ್ತಿದ್ದ ಶ್ರೀಗಳು ಯಾವಾಗಲೂ ಹಣ್ಣಿನ ಮರವೇರಿ ಹಣ್ಣನ್ನು ಕೊಯ್ದು ತಿನ್ನುತ್ತಿದ್ದರಂತೆ. ವೀರಾಪುರದ ಊರಿನಲ್ಲಿ ಯಾವ ಮರದಲ್ಲಿ ಹಣ್ಣು ಬಿಟ್ರೂ ಮೊದಲ ಪಾಲು ಶ್ರೀಗಳಿಗೆ ಮೀಸಲಾಗಿತ್ತು. ಬಾಲ್ಯದಲ್ಲಿಯೇ ದಾಸೋಹದ ಬಗ್ಗೆ ಅಪರಿಮಿತ ಆಸ್ಥೆ ಇಟ್ಟುಕೊಂಡಿದ್ದ ಶ್ರೀಗಳು ಹಣ್ಣನ್ನು ಇಡೀ ಊರಿನ ಹುಡುಗರಿಗೆ ಹಂಚಿಯೇ ತಿನ್ನುತ್ತಿದ್ದರು.
ಬಾಲ್ಯದಲ್ಲಿ ತಾಯಿ ನಿಧನ: ನಾಲ್ಕನೇ ತರಗತಿ ಓದುತ್ತಿದ್ದ ಶ್ರೀಗಳ ಬದುಕಿಗೆ ದೊಡ್ಡ ಅಘಾತವಾಗಿದ್ದು, ಎದೆಗವುಚಿಕೊಂಡು ಬದುಕಿನ ಅಷ್ಟು ಸಂಸ್ಕಾರ ಧಾರೆಯೆರೆದ ತಾಯಿಯನ್ನು ಕಳೆದುಕೊಂಡಾಗ. ಸಣ್ಣ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತೀರಾ ಅಘಾತ ಅನುಭವಿಸಿದ್ದ ಶ್ರೀಗಳು ತಮ್ಮನ್ನೇ ತಾವೇ ಸಮಾಧಾನ ಪಡಿಸಿಕೊಂಡು ಅಕ್ಕನಲ್ಲಿಯೇ ತಾಯಿಯ ಪ್ರೀತಿಯನ್ನು ಕಂಡ್ರು. ಮುಂದೆ ಬದುಕಿನಲ್ಲಿ ಅದೆಷ್ಟೋ ಅನಾಥ ಜೀವಗಳಿಗೆ ಗುರುಗಳು ತಾಯಿ ಪ್ರೀತಿಯನ್ನು ಮೊಗೆ ಮೊಗೆದು ಕೊಟ್ಟರು. ಹಸಿದ ಹೊಟ್ಟೆಗೆ ಅಮ್ಮನಂತೆ ಊಟ ಬಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv