ನವದೆಹಲಿ: 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡಲಾಗುತಿತ್ತು. ಆದರೆ 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ಮಾಡಲಾಗುವುದು ಎಂದು ತಿಳಿಸಿದರು.
Advertisement
2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ ಎಂದು ಹೇಳಿದರು.
Advertisement
A mobile App will be used in Census 2021. It will be a transformation from paper census to digital census: Union Home Minister @AmitShah pic.twitter.com/GYFhyxRgvM
— PIB India (@PIB_India) September 23, 2019
Advertisement
Advertisement
ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆಯುತ್ತದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಪೇಪರ್ ಸಮೀಕ್ಷೆ ಮಾಡಿದ ನಂತರ ಮತ್ತೊಮ್ಮೆ ಅದನ್ನು ಕಂಪ್ಯೂಟರಿಗೆ ದಾಖಲಿಸಿ ಮತ್ತೆ ಲೆಕ್ಕಾಚಾರ ಮಾಡಬೇಕಾಗಿತ್ತು. ಈಗ ಮೊದಲ ಹಂತದಲ್ಲೇ ಡೇಟಾ ಸರ್ವರ್‌ಗೆ ದಾಖಲಾಗುವುದರಿಂದ ಸಮಯ ಉಳಿತಾಯವಾಗುವುದರ ಜೊತೆ ಲೆಕ್ಕಾಚಾರವು ಸುಲಭವಾಗಲಿದೆ.
Honorable Home Minister Shri @AmitShah laid the foundation stone of Census Bhawan in #NewDelhi in the presence of Honorable Minister of State Shri @nityanandraibjp, Home Secretary Shri Ajay Kumar Bhalla, RGI Dr Vivek Joshi & other dignitaries. @HMOIndia#CensusForNewIndia pic.twitter.com/vWOJKqet6o
— Census India 2021 (@CensusIndia2021) September 23, 2019