ವಿಜಯಪುರ: ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ (Love) ಬಲಿಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೋಣಸಗಿ ಗ್ರಾಮ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಕೊಂಡಿದ್ದರು. ಆಗ ಗುರುಪ್ಪ ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೆ ತಂದೆಯ (Father) ಮಾತು ಕೇಳದೆ ಆತುರದಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅದಾದ ಬಳಿಕ ಮಲ್ಲು ಜಮಖಂಡಿ ಶವ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸಿಕ್ಕಿದೆ. ಸೆಪ್ಟೆಂಬರ್ 22 ರಂದು ನಡೆದ ಘಟನೆ ಇಂದು ಶವ ಸಿಕ್ಕಿದ ಬಳಿಕ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಮಗಳ ಸಾವಿಗೆ ಕಾರಣವಾದ ಪ್ರೇಮಿ ಮಲ್ಲುವನ್ನು ಬಿಡಬಾರದು ಎಂದು ಕೈಕಾಲು ಕಟ್ಟಿ ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಗೆ ಗುಡ್‌ನ್ಯೂಸ್ – ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ
ತಿಕೋಟಾ ಹಾಗೂ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್‌ನನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಸವಾರರು- ಓರ್ವ ಸಾವು