ತುಮಕೂರು: ಮದುವೆಯಾದ ಒಂದೂವರೆ ವರ್ಷಕ್ಕೆ ಗೃಹಿಣಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ.
ಕಲಾವತಿ (28) ಮೃತ ದುರ್ದೈವಿ. ಇದು ಕೊಲೆ ಅಂತ ಕಲಾವತಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಕಲಾವತಿ ಪತಿ, ನಾದಿನಿ ಮೇಲೆ ಆರೋಪ ಹೊರಿಸಿದ್ದಾರೆ. ಆರೋಪಿತರು ಪರಾರಿಯಾಗಿದ್ದಾರೆ.
Advertisement
ಕಳೆದ ತಿಂಗಳು ಪೊಲೀಸ್ ಎಮರ್ಜೆನ್ಸಿ 112 ಕ್ಕೆ ಕರೆ ಮಾಡಿ ಹಿಂಸೆ ಬಗ್ಗೆ ಗೃಹಿಣಿ ದೂರು ನೀಡಿದ್ದರು. ಅಂದಿನಿಂದ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
Advertisement
ಹಾರ್ಟ್ ಎಂಬಾಲಿಸಮ್‌ನಿಂದ ಹಾರ್ಟ್ ಅಟ್ಯಾಕ್ ಆಗಿದೆ ಎಂದು ನಿಮ್ಹಾನ್ಸ್ ವೈದ್ಯರು ವರದಿ ಕೊಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.