ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

Public TV
1 Min Read
women suicide dharwad

– ಸ್ಪರ್ಧಾತ್ಮಕ ಪರೀಕ್ಷೆ ಓದುತ್ತೇನೆಂದು ಬಾಡಿಗೆ ಮನೆಯಲ್ಲಿದ್ದ ಮಹಿಳೆ

ಧಾರವಾಡ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಗೆ ಬಿದ್ದ ಗೃಹಿಣಿ ತನ್ನ ಪತಿ ಬಿಟ್ಟು ಬಂದು ವರ್ಷದ ಬಳಿಕ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಧಾರವಾಡದ ಶ್ರೀನಗರ 1ನೇ ಕ್ರಾಸ್‌ನ ಮನೆಯಲ್ಲಿ ಘಟನೆ ನಡೆದಿದ್ದು, ಶ್ವೇತಾ ಗುದಗಾಪುರ (24) ನೇಣಿಗೆ ಶರಣಾದ ಗೃಹಿಣಿ.

ರಾಮದುರ್ಗ ಮೂಲದ ಶ್ವೇತಾ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು. ರಾಮದುರ್ಗದ ವಿಶ್ವನಾಥ ಜೊತೆಗೆ ಐದು ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ ಎರಡು ವರ್ಷದಿಂದ ಪತಿಯಿಂದ ದೂರವಾಗಿದ್ದರು.

ಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಶ್ವೇತ ಮರುಳಾಗಿದ್ದರು. ಧಾರವಾಡ ಮೂಲದ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದರು. ಬಳಿಕ ಪತಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದರು. ಇನ್‌ಸ್ಟ್ರಾಗ್ರಾಮ್‌ನಲ್ಲಿ ಈಕೆಗೆ ಯುವಕ ಪರಿಚಯವಾಗಿದ್ದ. ಯುವಕನೊಂದಿಗಿನ ಪರಿಚಯ ಪ್ರೀತಿಗೆ ತಿರುಗಿತ್ತು.

ಯುವಕನ ನಂಬಿ ಪತಿ ಬಿಟ್ಟು ಶ್ವೇತಾ ಬಂದಿದ್ದರು. ಧಾರವಾಡದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Share This Article