ರಾಮನಗರ: ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಗಡಿಯ (Magadi) ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಟಾಕ್ ವಾರ್ ಶುರುವಾಗಿದೆ. ಶಾಸಕ ಎ.ಮಂಜುನಾಥ್ (A.Manjunath) ಬಿಜೆಪಿ (BJP) ಸೇರ್ಪಡೆಗೆ ಮುಂದಾಗಿದ್ರು ಎಂಬ ಮಾಜಿ ಶಾಸಕ ಬಾಲಕೃಷ್ಣ (H.C Balakrishna) ಆರೋಪಕ್ಕೆ ಎ.ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಶುರುವಾಗಿದ್ದು ದಿನೇ ದಿನೇ ರಾಜಕೀಯ ಚಟುವಟಿಕೆ ರಂಗೇರುತ್ತಿದೆ.
Advertisement
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಕ್ ಸಮರವೇ ಏರ್ಪಟ್ಟಿದೆ. ಶಾಸಕ ಎ.ಮಂಜುನಾಥ್ ಬಿಜೆಪಿ ಸೇರ್ಪಡೆಗೆ ಸಿಪಿ.ಯೋಗೇಶ್ವರ್ (C. P Yogeshwara) ಜೊತೆ ವಿಧಾನಸೌಧ ಸುತ್ತುತ್ತಿದ್ರು ಎಂದು ಮಾಜಿ ಶಾಸಕ ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ನಿಜವೋ ಸುಳ್ಳೊ ಎಂಬುದನ್ನು ಶಾಸಕರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ – ಸಿದ್ದರಾಮಯ್ಯ ಅಧಿಕೃತ ಘೋಷಣೆ
Advertisement
Advertisement
ಮಾಗಡಿ ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮಂಜುನಾಥ್ ಶಾಸಕರಾಗಿ ಆಯ್ಕೆಯಾದಾಗ ಯೋಗೇಶ್ವರ್ ಬಳಿ ಮಾತನಾಡಿದ್ದರು. ಬಾಲಕೃಷ್ಣರನ್ನು ಬಿಜೆಪಿಗೆ ಕರೆಸಿ, ನಾನೂ ಬಿಜೆಪಿಗೆ ಬರುತ್ತೇನೆ ಎಂದಿದ್ದಾರಂತೆ. ಬಾಲಕೃಷ್ಣ ಲೋಕಸಭಾ ಚುನಾವಣೆಗೆ ನಿಲ್ಲಲಿ, ನಾನು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಸಿಪಿ ಯೋಗೇಶ್ವರ್ ನನ್ನ ಬಳಿ ಚರ್ಚಿಸಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ. ಅಲ್ಲದೇ ಎ.ಮಂಜುನಾಥ್ ಭಯದಿಂದ ಜೆಡಿಎಸ್‍ನಲ್ಲಿದ್ದಾರೆಯೇ ಹೊರತು ಜೆಡಿಎಸ್ ಮೇಲಿನ ಗೌರವದಿಂದಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ
Advertisement
ಬಾಲಕೃಷ್ಣ ಆರೋಪಕ್ಕೆ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದ್ದಾರೆ. ಹೌದು ನನಗೆ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ ಆದರೆ ಬಾಲಕೃಷ್ಣ ರೀತಿ ಮಣ್ಣು ತಿನ್ನುವ ಕೆಲಸ ನಾನು ಮಾಡಲಿಲ್ಲ. ಅವರ ಹಾಗೆ 10 ಕೋಟಿಗೆ ತಲೆಮಾರಿಕೊಳ್ಳುವ ಕೆಲಸ ಮಾಡಲಿಲ್ಲ. ಮೈತ್ರಿ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯೋಗೇಶ್ವರ್ ಅವರೇ ನನ್ನನ್ನು ಭೇಟಿ ಆಗಿದ್ದರು. ಪಕ್ಷಕ್ಕೆ ಆಹ್ವಾನಿಸಿದ್ರು, ಆಗ ನಾನು ಅದನ್ನು ರಿಜೆಕ್ಟ್ ಮಾಡಿದ್ದೆ. ನಾನು ಮಾಜಿ ಶಾಸಕರ ರೀತಿ ಸೇಲ್ ಆಗೋ ಗಿರಾಕಿ ಅಲ್ಲ. ಬೇಕಿದ್ರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ಬಾಲಕೃಷ್ಣಗೆ ಸವಾಲು ಹಾಕಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k