ಮಡಿಕೇರಿ: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಗುರುವಾರ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ನಾಡಿನ ಜನರಿಗೆ ದರ್ಶನ ನೀಡಿದ ಬಳಿಕ ಶುಕ್ರವಾರ ಹಾರಂಗಿ ಜಲಾಶಯಕ್ಕೆ ಅರಕಲಗೂಡು ಶಾಸಕ ಎ.ಮಂಜು (A Manju) ಹಾಗೂ ಮಡಿಕೇರಿ ಶಾಸಕ ಮಂಥರ್ ಗೌಡ (Manthar Gowda) ಬಾಗಿನ ಅರ್ಪಿಸಿದರು.
Advertisement
ಕೊಡಗಿನ ಹಾರಂಗಿ ಜಲಾಶಯ (Harangi Dam) ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶಾಸಕರಿಬ್ಬರೂ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ. ಜಲಾಶಯದ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಶಾಸಕರು ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದರು. ನಂತರ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ವಾದ್ಯಗೋಷ್ಠಿಗಳ ಜೊತೆ ಆಗಮಿಸಿ ಅಣೆಕಟ್ಟೆ ಮೇಲೆ ವ್ಯವಸ್ಥೆ ಮಾಡಿದ್ದ ಮಂಟಪದಲ್ಲಿ ನಿಂತು ಬಾಗಿನ ಸಮರ್ಪಿಸಿದರು.
Advertisement
Advertisement
ಬಳಿಕ ಮಾತನಾಡಿದ ಶಾಸಕ ಮಂಥರ್ ಗೌಡ, ಕಾವೇರಿ ತೀಥೋದ್ಭವ ಅದ ಬಳಿಕ ಅಲ್ಲಿಂದ ತೀರ್ಥ ತೆಗೆದುಕೊಂಡು ಹಾರಂಗಿಯಲ್ಲಿರೋ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಬರುತ್ತಿದ್ದಾರೆ. ಅರಂತೆ ಇಂದು ಪೂಜೆ ಸಲ್ಲಿಸಿದ್ದೇವೆ. ಕಾವೇರಿ ನದಿಯನ್ನೇ ಅವಲಂಬಿಸಿರುವ ಹಾಸನ ಕೆ.ಆರ್ ನಗರ, ಪಿರಿಯಾಪಟ್ಟಣ, ಮೈಸೂರು ಸೇರಿದಂತೆ ಈ ಭಾಗದ ರೈತರಿಗೆ ಒಳ್ಳೆಯದಾಗಲಿ ಅಂತ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಚುನಾವಣೆ ನೀತಿ ಸಂಹಿತೆ ಕಾರಣದಿಂದ ಪಂಚಮಸಾಲಿ ಮೀಸಲಾತಿ ನಿರ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ
Advertisement
ಇನ್ನೂ 17 ಕಿಮೀ ವರೆಗೆ ಅಷ್ಟೇ ಹಾರಂಗಿ ನೀರು ಕೊಡಗಿನ ಜನರಿಗೆ ಬಳಕೆಯಾಗಿದೆ. ಹೆಚ್ಚಾಗಿ ಮೈಸೂರು, ಹಾಸನ ಭಾಗದ ಜನರಿಗೆ ವರದಾನ ಅಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: MUDA Scam| ಸಿಎಂ ತಕ್ಷಣ ರಾಜೀನಾಮೆ ನೀಡಬೇಕು, ಸಿಬಿಐಗೆ ನೀಡದಿದ್ರೆ ಕೇಸ್ ಮುಚ್ಚಿ ಹಾಕ್ತಾರೆ: ಛಲವಾದಿ ನಾರಾಯಣಸ್ವಾಮಿ