ಹಾಸನ: ಸಚಿವ ಎಚ್.ಡಿ.ರೇವಣ್ಣ ರಾಮನಾಥಪುರಕ್ಕೆ ಬಂದಾಗ ಬಿಸ್ಕೆಟ್ ಎಸೆದಿದ್ದ. ಈಗ ಮನೆ ಮನೆಗೆ ಹೋಗ್ತಿದ್ದಾನೆ ಎಂದು ಹಾಸನ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎ. ಮಂಜು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ಇಡೀ ಪ್ರಪಂಚ ಇಂದು ನಮ್ಮ ದೇಶವನ್ನು ನೋಡುತ್ತಿದೆ. ಎಲ್ಲೋ ಇದ್ದ ನಮ್ಮ ದೇಶವನ್ನು ಈಗ ನಾಲ್ಕನೇ ಸ್ಥಾನಕ್ಕೆ ತಂದ ಕೀರ್ತಿ ಮೋದಿಯವರಿಗೆ ಸಲ್ಲಬೇಕು. ನೆರೆ ರಾಷ್ಟ್ರಗಳ ಬೆಂಬಲದಲ್ಲಿ ಉಗ್ರರ ದಮನ ಮಾಡಿದರು. ಇದು ನಮ್ಮ ದೇಶಕ್ಕೆ ಕೀರ್ತಿಯ ವಿಚಾರ. ಸ್ವಾತಂತ್ರ್ಯ ಬಂದಾಗಿನಿಂದಲೂ ನಮಗೆ ನೆಮ್ಮದಿ ಇರಲಿಲ್ಲ. ಮೋದಿ ಸ್ವಾರ್ಥವಿಲ ದೇಶಕ್ಕಾಗಿ ದುಡಿಯುವ ವ್ಯಕ್ತಿ. ಕಾಂಗ್ರೆಸ್‍ನಲ್ಲಿ ಡಿಕೆಶಿ ಹೊರತು ಪಡಿಸಿದರೆ ನಾನೇ ನಮ್ಮ ಸಮುದಾಯದ ನಾಯಕನಾಗಿದ್ದೆ. ಆದರೆ ಇಂದು ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಹಿಂದೆ ನಾನು ಮೊದಲ ಬಾರಿಗೆ ಶಾಸಕನಾಗಿದ್ದು ಬಿಜೆಪಿಯಿಂದ, ಈಗ ಎಂಪಿ ಆಗುವುದು ಸಹ ಇದೇ ಪಕ್ಷದಿಂದ ಎಂದು ಹೇಳಿದ್ದಾರೆ.
Advertisement
Advertisement
ಹಾಸನ ಜಿಲ್ಲೆಯಲ್ಲಿ 1999ರಲ್ಲಿ ಆದ ಚುನಾವಣೆ ಫಲಿತಾಂಶ ಆಗಿದ್ದೇ ಈಗ ಮರುಕಳಿಸುತ್ತದೆ. ಏಕೆಂದರೆ 9 ನಂಬರ್ ಅವರಿಗೆ ಕಂಟಕ. ಅವರಿಗೆ ಅವರೇ ಅಪಶಕುನ. ಅವರಿಗೆ ಮಾತ್ರ ದೇವರಲ್ಲ ನಮಗೂ ದೇವರಿದ್ದಾನೆ. ಒಳ್ಳೆಯದು ಕೆಟ್ಟದು ದೇವರಿಗೆ ಗೊತ್ತು. ಪೂಜೆ ಮಾಡಿ ಮಾಡಿ ಜಯಗಳಿಸಿದ್ದಾರೆ ಅಂತಾರೆ. ಆದರೆ ಅವರನ್ನು ನಿಮ್ಮ ಮನೆ ಮನೆಗೆ ಹೋಗುವಂತೆ ಮಾಡಿರೋದು ನಮ್ಮ ಮೊದಲ ಗೆಲುವು. ರೇವಣ್ಣ ರಾಮನಾಥಪುರಕ್ಕೆ ಬಂದಾಗ ಬಿಸ್ಕೆಟ್ ಎಸೆದಿದ್ದ. ಈಗ ಮನೆ ಮನೆಗೆ ಹೋಗ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಇವರಿಗೆ ನಂಬರ್ ಗಳು ಮಾತ್ರ ಬೇಕು. ಏಕೆಂದರೆ ನಾನು ಆರು ತಿಂಗಳ ಹಿಂದೆಯೇ ಬಿಜೆಪಿಗೆ ಹೋಗುವ ಕುರಿತು ತೀರ್ಮಾನಿಸಿದ್ದೆ. ಬಿಜೆಪಿ ದೇಶದಲ್ಲಿ 350 ಸ್ಥಾನಗಳು ಗೆಲ್ಲುತ್ತದೆ. ಸೂರ್ಯ-ಚಂದ್ರ ಇರುವುದು ಎಷ್ಟು ನಿಜವೋ, ಅದೇ ರೀತಿ ಮೋದಿ ಪ್ರಧಾನಿ ಆಗೋದು ಅಷ್ಟೇ ಸತ್ಯ. ಹಿಂದಿನ ಚುನಾವಣೆಯಲ್ಲಿ ನನಗೆ ಇನ್ನೂ ಐವತ್ತು ಸಾವಿರ ಮತಗಳ ಅವಶ್ಯಕತೆ ಇತ್ತು ಅಷ್ಟೇ. 50,000 ಮತ ಸಿಕ್ಕಿದಿದ್ದರೆ, ನನಗೆ ದೇವೇಗೌಡರ ವಿರುದ್ಧ ಗೆಲುವು ಸಿಗುತಿತ್ತು. ಇವರ ವಂಶವನ್ನು ರಾಜಕೀಯದಿಂದ ತೆಗೆಯಲು ನೀವೆಲ್ಲ ಸಹಕರಿಸಿ ಎಂದು ಎ. ಮಂಜು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಎಂಟು ತಿಂಗಳಾದರೂ ಸರ್ಕಾರ ಬಂದು ಯಾರನ್ನು ಮಾತನಾಡಿಸದವರು ಈಗ ಎಲ್ಲರ ಮನೆ ಬಾಗಿಲಿಗೆ ಹೋಗ್ತಿದ್ದಾರೆ. ದೇವೇಗೌಡರು ಕಣ್ಣೀರು ಹಾಕಿದ್ರು. ಅವರ ಮಕ್ಕಳು-ಮೊಮ್ಮಕ್ಕಳು ಸಹ ಅತ್ತು ಬಿಟ್ಟು ನಾಟಕ ಮಾಡಿದರು. ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದರೆ ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ನಾಯಕರಿಗೆ ಅವಕಾಶ ಸಿಗಬಹುದು.
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವುದಕ್ಕೆ ನಾನು ರಾಹುಲ್ ಗಾಂಧಿಗೆ ಹೇಳಿದ್ದೆ. ಆದರೆ ನಿಮ್ಮ ಮಗನನ್ನೇ ಮಾಡಿ ಎಂದು ರಾಹುಲ್ ಗಾಂಧಿಯೇ ಹೇಳಿದ್ದು ಎಂದು ಗೌಡರು ಸುಳ್ಳು ಹೇಳುತ್ತಾರೆ. ಇವರ ಮನೆಯವರಿಗೆ ದುಡ್ಡಿರುವ ಖಾತೆಯೇ ಬೇಕು. ರೈತರ ಬಗ್ಗೆ, ಕೃಷಿ ಬಗ್ಗೆ ಇರುವ ಇಲಾಖೆಗೆ ಇವರು ಮಂತ್ರಿಯಾಗಲ್ಲ ಎಂದು ಎ. ಮಂಜು, ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 25 ರಂದು 12ಗಂಟೆಗೆ ನಮ್ಮ ನಾಮಪತ್ರ ಸಲ್ಲಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಐತಿಹಾಸಿಕ ಸಭೆಯನ್ನು ನಡೆಸುತ್ತೇವೆ ಎಂದು ಹಾಸನದಲ್ಲಿ ಎ.ಮಂಜು ಹೇಳಿದ್ದಾರೆ.
https://www.youtube.com/watch?v=0ZzoSd4G8O4