– ಕೂಡಲೇ ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ
– ರೇವಣ್ಣ ಏಳನೇ ಕ್ಲಾಸ್ ಬುದ್ಧಿ ಬಿಡಲಿ
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಏಕೆಂದರೆ ಎಲ್ಲೋ ಶಾಸ್ತ್ರ ಕೇಳಿದ್ದೇವೆ ಕನ್ನಡಿಗರಿಗೆ ಮತ್ತೆ ಪ್ರಧಾನಿ ಅವಕಾಶ ಇದೆ ಎಂದು ಎಡವಟ್ಟು ಮಾಡಿದರೆ ಹೇಗೆ ಎಂದು ಮಾಜಿ ಸಚಿವ ಎ ಮಂಜು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಮತದಾರರು ಸ್ವಾಭಿಮಾನಿಗಳಾಗಬೇಕು. ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಲೇ ಬೆಳೆದವರು ದೇವೇಗೌಡರು ಇಂದು ಕುಟುಂಬ ಬಿಟ್ಟು ರಾಜಕಾರಣ ಮಾಡಲಾಗಲ್ಲ ಎನ್ನುತ್ತಾರೆ. ಅಂಬಿಯಿಂದ ಹೆಚ್ಚು ಸಹಾಯ ಆಗಿರುವುದು ಜೆಡಿಎಸ್‍ಗೆ, ಆದರೆ ಅಂತಹವರೇ ಅಂಬರೀಶ್ ಅವರ ವಿರುದ್ಧ ಮಾತನಾಡುತ್ತಾರೆ. ಸುಮಲತಾರನ್ನು ಮಂಡ್ಯ ಗೌಡ್ತಿ ಎನ್ನುತ್ತಾರೆ. ಹೆಣ್ಣಿನ ಬಗ್ಗೆ ಸಣ್ಣತನದ ಹೇಳಿಕೆ ಕೊಡುತ್ತಾರೆ. ಇದು ನಮ್ಮ ಭಾರತೀಯ ಸಂಸ್ಕೃತಿಗೆ ಅಗೌರವ ಎಂದು ಬೇಸರ ವ್ಯಕ್ತಪಡಿಸಿದರು.
ದೇವೇಗೌಡರ ಕುಟುಂಬ ತಮ್ಮ ರಾಜಕೀಯ ಉದ್ಧಾರಕ್ಕಾಗಿ ಮೈತ್ರಿ ಸರ್ಕಾರ ರಚನೆ ಮಾಡಿದೆ. ಸ್ಥಳೀಯರಿಗೆ ಟಿಕೆಟ್ ಕೊಡಿಸುವ ಬದಲು ಸಿನಿಮಾ ಟಿಕೆಟ್ ಕೊಡಿಸುತ್ತಾರೆ. ನಿಖಿಲ್ ಗೆ ರಾಜಕೀಯ ಪ್ರಬುದ್ಧತೆ ಇಲ್ಲ, ಅವರಪ್ಪ ಸಿಎಂ, ತಾತಾ ಮಾಜಿ ಪ್ರಧಾನಿ ಎಂಬುವುದೇ ಸಾಕಗಲ್ಲ. ಸೇವೆ ಮಾಡಲು ಅಧಿಕಾರ ಬೇಕಿಲ್ಲ ಎಂದರು. ಅಲ್ಲದೇ ನಿಖಿಲ್ ಅವರಿಂದ ಅಭಿವೃದ್ಧಿ ಸಾಧ್ಯ ಎಂದರೆ, ಸರ್ಕಾರದಲ್ಲಿ ಈಗ ಇರುವ ಮೂವರು ಸಚಿವರು ರಾಜೀನಾಮೆ ನೀಡಲಿ. ಈಗ ಅವರೆಲ್ಲರೂ ಅಸಮರ್ಥರು ಎಂಬುವುದನ್ನು ಒಪ್ಪಿಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದರು.
ಸಚಿವ ಡಿಕೆ ಸುರೇಶ್ ಅವರಿಗೆ ಪಕ್ಷಕ್ಕಿಂತ ಸರ್ಕಾರವೇ ಮುಖ್ಯವಾಗಿದೆ. ಪಕ್ಷವಿದ್ದರೇ ಸರ್ಕಾರ, ಅಧಿಕಾರ ನಮ್ಮ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೇ ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರೇವಣ್ಣ 7 ನೇ ಕ್ಲಾಸ್ ಬುದ್ಧಿ ಬಿಡಪ್ಪ ಅಂದ್ರೆ ಸರಿ ಹೋಗುತ್ತಾ? ಎಂದು ಲೇವಡಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv