ಬೀದರ್: ಕೊಟ್ಟ ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಹಾಡಹಗಲೇ ಗೆಳೆಯನಿಗೆ ಚಾಕು ಇರಿದ ಭಯಾನಕ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyana) ಪಟ್ಟಣದಲ್ಲಿ ನಡೆದಿದೆ.
ಆರೋಪಿಯನ್ನು ದಯಾನಂದ ಶಿಂಧೆ ಹಾಗೂ ಗಾಯಾಳುವನ್ನು ಬಸವಕಲ್ಯಾಣದ ತ್ರಿಪುರಾಂತ ನಿವಾಸಿ ಅಶೋಕ್ ಪಾಟೀಲ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್
- Advertisement3
ನಗರದ ಬಾರ್‌ವೊಂದರಲ್ಲಿ ಸ್ನೇಹಿತರ ಜೊತೆ ಅಶೋಕ್ ಕುಳಿತಿದ್ದ. ಈ ವೇಳೆ ಕೈಯಲ್ಲಿ ಚಾಕು ಹಿಡಿದುಕೊಂಡೆ ಬಾರ್‌ಗೆ ನುಗ್ಗಿದ್ದ ಆರೋಪಿ ದಯಾನಂದ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕ್ ಆರೋಪಿ ದಯಾನಂದನಿಗೆ 10 ಸಾವಿರ ರೂ. ಸಾಲ ನೀಡಿದ್ದ. ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ.
- Advertisement
ಚಾಕು ಇರಿದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಗಾಯಾಳು ಅಶೋಕ್‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬಸವಕಲ್ಯಾಣ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ತಿರುಪತಿಯಲ್ಲಿ ಭಾರಿ ಅನಾಹುತ – ಕಾಲ್ತುಳಿತಕ್ಕೆ 4 ಮಂದಿ ಸಾವು