ಲೇಡಿಸ್ ಸೀಟ್‍ನಲ್ಲಿ ಕೂತು ಪ್ರಯಾಣಿಸುವ ಮುನ್ನ ಎಚ್ಚರ – ಇಲ್ಲದ್ದಿದ್ದರೆ ಬೀಳುತ್ತೆ ಫೈನ್

Public TV
2 Min Read
BMTC

ಬೆಂಗಳೂರು: ಬಿಎಂಟಿಸಿ ಬೆಂಗಳೂರು ನಗರದ ಸಂಚಾರ ನಾಡಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್‍ನಲ್ಲಿ (BMTC Bus) ಸಂಚರಿಸುತ್ತಾರೆ. ಒಂದೇ ಒಂದು ದಿನ ಬಿಎಂಟಿಸಿ ಸಂಚಾರ ಸ್ಥಗಿತವಾದರೆ ಬೆಂಗಳೂರಿಗರ ಕಷ್ಟಮಾತ್ರ ಹೇಳತೀರದಂತಿರುತ್ತದೆ. ಈ ನಡುವೆ ಕೆಲ ಪ್ರಯಾಣಿಕರು (Passangers) ಸಂಚಾರ ಮಾಡುವ ಭರದಲ್ಲಿಯೋ ಅಥವಾ ತಮ್ಮ ನಿರ್ಲಕ್ಷ್ಯದಿಂದಲೋ ತಾವು ಮಾಡಿದ ಯಡವಟ್ಟಿನಿಂದಲೇ ದಂಡ ಕಟ್ಟಿದರೆ, ಮತ್ತೆ ಕೆಲವರು ಟಿಕೆಟ್ ಪಡೆಯದೇ ಬಿಟ್ಟಿಯಾಗಿ ಸಂಚಾರ ಮಾಡುವ ಕಳ್ಳಾಟದಿಂದ ತಗ್ಲಾಕೊಂಡು ಬಿಎಂಟಿಸಿ ಖಜಾನೆಗೆ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ಹಣ ತುಂಬಿಸಿದ್ದಾರೆ.

BMTC 1

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಟಿಕೆಟ್ (Bus Ticket) ರಹಿತ ಪ್ರಯಾಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆಗಸ್ಟ್‌ನಲ್ಲಿ 2,744 ಪ್ರಯಾಣಿಕರಿಂದ 4.62 ಲಕ್ಷ ರೂಪಾಯಿಗಳನ್ನು ದಂಡದ ಮೂಲಕ ಸಂಗ್ರಹಿಸಿದೆ. ಬಿಎಂಟಿಸಿ ಬಸ್‍ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಹಾಗೂ ಸಂಸ್ಥೆಯ ಸಾರಿಗೆ ಆದಾಯ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡ ನಗರದಾದ್ಯಂತ ಆಗಸ್ಟ್‌ನಲ್ಲಿ 18,972 ಟ್ರಿಪ್‍ಗಳಲ್ಲಿ ತಪಾಸಣೆ ನಡೆಸಿತ್ತು. ಇದರಲ್ಲಿ 2,625 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು 4.50 ಲಕ್ಷ ರೂಪಾಯಿ ದಂಡ (Fine) ವಸೂಲಿ ಮಾಡಿದೆ. ಇಷ್ಟೇ ಅಲ್ಲ ಟಿಕೆಟ್ ರಹಿತ ಪ್ರಯಾಣಿಕರು ಸಂಚಾರ ಮಾಡುತ್ತಿದ್ದ ಬಸ್‍ಗಳಲ್ಲಿ ಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ ನಿರ್ವಾಹಕರಗಳ ವಿರುದ್ಧವು ಕೂಡ 1,430 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರಿನ PFI, SDPI ಕಚೇರಿ ಮೇಲೆ NIA ದಾಳಿ

BMTC 2

ಇದರ ಮಧ್ಯೆ ಮಹಿಳೆಯರಿಗಾಗಿ ಮೀಸಲಿರಿಸಿದ್ದ ಸೀಟ್‍ಗಳಲ್ಲಿ (Ladies Seat) ಕೂತು ಚೆಕ್ಕಿಂಗ್ ಸ್ಕ್ವಾಡ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡವರ ಸಂಖ್ಯೆ ಕೂಡ ಕಡಿಮೆ ಇಲ್ಲ. ನಗರದಾದ್ಯಂತ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರಿಗೂ ದಂಡದ ಬಿಸಿ ಜೋರಾಗಿಯೇ ತಟ್ಟಿದೆ. 119 ಪುರುಷ ಪ್ರಯಾಣಿಕರಿಗೆ ಮಹಿಳೆರ ರಿಸರ್ವ್ ಸೀಟ್ ಬಳಕೆ ಮಾಡಿದಕ್ಕಾಗಿ 11,900 ರೂಪಾಯಿಗಳನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 177 ಮತ್ತು 94ರ ಪ್ರಕಾರ ದಂಡ ವಿಧಿಸಲಾಗಿದೆ.

ಒಟ್ಟಾರೆ ಕೆಲವರು ಲೇಡಿಸ್ ಸೀಟ್‍ನಲ್ಲಿ ಕೂತು ಸಿಕ್ಕಿ ಹಾಕಿಕೊಂಡರೆ, ಮತ್ತೆ ಕೆಲವರು ಟಿಕೆಟ್ ಪಡೆಯದೇ ಕದ್ದು ಸಂಚಾರಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇನ್ನಾದರೂ ಬಿಎಂಟಿಸಿಯಲ್ಲಿ ಸಂಚಾರ ಮಾಡುವವರು ನಿಯಮ ಪಾಲನೆ ಜೊತೆಗೆ ಟಿಕೆಟ್ ತೆಗೆದುಕೊಳ್ಳುವುದನ್ನ ಮರೆಯದಿದ್ದರೆ ಒಳ್ಳೆಯದು. ಇದನ್ನೂ ಓದಿ: ಪ್ರೀತಿಸಿ ಊರು ಬಿಟ್ಟ ಅಪ್ರಾಪ್ತ ಪ್ರೇಮಿಗಳು- ಮನನೊಂದ ಬಾಲಕಿ ತಂದೆ ಆತ್ಮಹತ್ಯೆಗೆ ಶರಣು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *