ಚಿಕ್ಕಬಳ್ಳಾಪುರ: ಆನ್‌ಲೈನ್ ಆ್ಯಪ್‌ಗಳಲ್ಲಿ (Online App) ಸಾಲ ಪಡೆದ ವ್ಯಕ್ತಿಯೊಬ್ಬ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ನಿವಾಸಿ ಕಾರ್ ಮೆಕ್ಯಾನಿಕ್ ಬಾಬಾಜಾನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಲೈವ್ ಇನ್ ಕ್ರೆಡಿಟ್, ಎಂಪೈರ್ ಕ್ರೆಡಿಟ್, ಹ್ಯೂಗೋ ಲೋನ್, ಪೇವಿ ಇಂಡಿಯಾ, ಕಾಯಿನ್ ಪಾರ್ಕ್, ಕ್ಯಾಷ್ ಲೆಂಟ್ ಆಪ್ ಗಳಲ್ಲಿ ತಲಾ 5 ಸಾವಿರದಂತೆ 30 ಸಾವಿರ ಲೋನ್ (Loan) ಪಡೆದಿದ್ದ. ಇದನ್ನೂ ಓದಿ: ಶಬರಿಮಲೆ ಹಾದಿಯಲ್ಲಿ ಈ ಬಾರಿ 23 ಮಂದಿ ಹೃದಯಾಘಾತದಿಂದ ಸಾವು
ಲೋನ್ ಪಡೆದು ಮರು ಪಾವತಿ ಮಾಡಿದ್ರೂ ಮರಳಿ ಖಾತೆಗೆ ಹಣ ಹಾಕಿ, ಬಡ್ಡಿ ಕಟ್ಟುವಂತೆ ಪೀಡಿಸುತ್ತಿದ್ದರು. ಅಲ್ಲದೇ ಬಡ್ಡಿ ಕಟ್ಟಿಲ್ಲ ಅಂತಾ ಬಾಬಾಜಾನ್ ಫೋಟೋವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ್ದು, ಅಶ್ಲೀಲ ಬರಹಗಳನ್ನ ಬರೆದು ಬಾಬಾಜಾನ್ ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸಿದ್ದಾರೆ.
ಇಷ್ಟು ಸಾಲದು ಅಂತಾ ಫೋನ್ ಮಾಡಿ ಹಣ ಕಟ್ಟುವಂತೆ ಪದೇ-ಪದೇ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಮನನೊಂದ ಬಾಬಾಜಾನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್
ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಬಾಜಾನ್ ಚೇತರಿಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.