ಬೀದರ್: ಗ್ಯಾರಂಟಿ ಘೋಷಣೆಯ ನೆಪದಲ್ಲಿ ಡೇಟಾ ಸಂಗ್ರಹ (Data Collection) ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತೆಯನ್ನು ವ್ಯಕ್ತಿಯೊಬ್ಬರು ತರಾಟೆ ತೆಗೆದುಕೊಂಡ ಘಟನೆ ಬೀದರ್‌ನ (Bidar) ಓಲ್ಡ್ ಸಿಟಿಯಲ್ಲಿ ನಡೆದಿದೆ.
ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಪರ ಗ್ಯಾರಂಟಿ ಕಾರ್ಡ್ (Guarantee Card) ಹಂಚುತ್ತಿದ್ದಾಗ, ಕಾಂಗ್ರೆಸ್ (Congress) ಕಾರ್ಯಕರ್ತೆಯನ್ನು ವ್ಯಕ್ತಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral) ಆಗಿದೆ. ಇದನ್ನೂ ಓದಿ: ಇಂದು ಬಿಡುಗಡೆ ಆಗಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತಡೆ – ಡಿಕೆಶಿ ಹೇಳಿದ್ದೇನು?
Advertisement
Advertisement
ನೀವು ಬರೀ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಮಾತ್ರ ಹಂಚಿ. ಅದನ್ನು ಬಿಟ್ಟು ಐಡಿ ಕಾರ್ಡ್ (ID Card) ಕೇಳುವುದು ಐಪಿಸಿ ಸೆಕ್ಷನ್ 420 ಕೇಸ್ ಆಗುತ್ತದೆ ಎಂದು ವ್ಯಕ್ತಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ನಮ್ಮ ಡೇಟಾ ಸಂಗ್ರಹ ಮಾಡಲು ಏನು ಅಧಿಕಾರವಿದೆ ಎಂದು ವ್ಯಕ್ತಿ ಪ್ರಶ್ನೆ ಮಾಡುತ್ತಿದ್ದಂತೆ ನೀವು ಪಕ್ಕಾ ಬಿಜೆಪಿಯವರು (BJP) ಇರಬೇಕು ಎಂದು ಕಾರ್ಯಕರ್ತೆ ಆ ವ್ಯಕ್ತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇಬ್ಬರ ನಡುವೆಯ ಮಾತುಕತೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಯಾದ ಮಂಡ್ಯ ಕಾಂಗ್ರೆಸ್ ಮುಖಂಡ
Advertisement